ಶಾಸಕ ತನ್ವೀರ್ ಸೇಠ್ ಕೊಲೆಯತ್ನ : ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ ಖಂಡನೆ

Update: 2019-11-21 16:38 GMT

ಮಂಗಳೂರು, ನ.21: ಮಾಜಿ ಸಚಿವ, ಶಾಸಕ ತನ್ವೀರ್ ಸೇಠ್ ಮೇಲೆ ಮೈಸೂರಿನಲ್ಲಿ ಇತ್ತೀಚೆಗೆ ಏಕಏಕಿ ನಡೆದ ಕೊಲೆಯತ್ನ ಪ್ರಕರಣವನ್ನು ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯು ತೀವ್ರವಾಗಿ ಖಂಡಿಸಿದೆ.

ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಹಾಜಿ ಯು.ಕೆ.ಮೋನು ಕಣಚೂರು ಅಧ್ಯಕ್ಷತೆಯಲ್ಲಿ ಖಂಡನಾ ಸಭೆ ನಡೆಯಿತು. ಪ್ರಕರಣದ ಸಮಗ್ರ ತನಿಖೆ ನಡೆಸಿ ತಪಿತಸ್ಥರಿಗೆ ಸೂಕ್ತ ಶಿಕ್ಷೆ ವಿಧಿಸಬೇಕು. ಪ್ರಕರಣದ ಹಿಂದಿರುವ ದುಷ್ಟಶಕ್ತಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮಕ್ಕೆ ಒಳಪಡಿಸಬೇಕು ಎಂದು ಸಭೆಯು ಆಗ್ರಹಿಸಿತು.

ಮಾಜಿ ಸಚಿವ ತನ್ವೀರ್ ಸೇಠ್ ಅಲ್ಪಸಂಖ್ಯಾತರ ಹಾಗೂ ವಕ್ಫ್ ಇಲಾಖೆಯಲ್ಲಿ ಅನೇಕ ಮಹತ್ತರ ಕಾರ್ಯ ನಿರ್ವಹಿಸಿದ್ದಾರೆ. ಅವರು ಶೀಘ್ರ ಗುಣಮುಖರಾಗಿ ಬರಲೆಂದು ಸಭೆಯಲ್ಲಿ ಹಾರೈಸಲಾಯಿತು.

ಸಭೆಯಲ್ಲಿ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷ ಹಾಜಿ ಶಾಹುಲ್ ಹಮೀದ್ ಮೆಟ್ರೊ, ಸದಸ್ಯರಾದ ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಅಬ್ದುಲ್‌ಖಾದರ್ (ಯು.ಕೆ.ಮೋನು), ಉಸ್ಮಾನ್ ಹಾಜಿ ಕರೋಪಾಡಿ, ನಝೀರ್ ಮಠ, ಉಮರ್ ಪಜೀರ್, ಅಬ್ದುಲ್ ಜಲೀಲ್ ಕೃಷ್ಣಾಪುರ, ರಶೀದ್ ವಿಟ್ಲ, ಡಿ.ಎಂ. ಅಸ್ಲಾಂ, ಮುಸ್ತಫಾ ಸುಳ್ಯ, ಉಸ್ಮಾನ್ ಕೆ.ಎ. ಕೆ.ಸಿ.ರೋಡು, ಅಬೂಸಾಲಿ, ಇಸ್ಮಾಯೀಲ್ ಉಳಾಯಿಬೆಟ್ಟು, ಯಾಕೂಬ್ ದರ್ಬೆ ಮತ್ತಿತರರು ಉಪಸ್ಥಿತರಿದ್ಧರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News