ನ. 24: ಗಾಂಧಿ ‘150’ ವಿಚಾರ ಸಂಕಿರಣ

Update: 2019-11-21 16:50 GMT

ಮಂಗಳೂರು, ನ.19: ಸಮುದಾಯ ಕರ್ನಾಟಕ ರಾಜ್ಯ ಸಮ್ಮೇಳನ ಡಿಸೆಂಬರ್‌ನಲ್ಲಿ ಕೋಲಾರದಲ್ಲಿ ನಡೆಯಲಿದ್ದು, ಅದರ ಪೂರ್ವಭಾಯಾಗಿ ರಾಜ್ಯದಲ್ಲಿರುವ ಸಮುದಾಯ ಘಟಕಗಳು ಘಟಕ ಸಮ್ಮೇಳನ ನಡೆಸಲಾಗುತ್ತಿವೆ. ಮಂಗಳೂರು ಸಮುದಾಯದ ಸಮ್ಮೇಳನವು ನ. 24ರಂದು ಬೆಳಗ್ಗೆ 10 ಗಂಟೆಗೆ ನಗರದ ಸಹೋದಯ ಸಭಾಂಗಣದಲ್ಲಿ ಆರಂಭಗೊಳ್ಳಲಿದೆ.

ಸಮುದಾಯ ಕರ್ನಾಟಕ ರಾಜ್ಯ ಸಮಿತಿಯ ಅಧ್ಯಕ್ಷ ಅಚ್ಯುತ ನೆಲ್ಲಿತೀರ್ಥ ಸಮ್ಮೇಳನವನ್ನು ಉದ್ಘಾಟಿಸುವರು. ಮಂಗಳೂರು ಸಮುದಾಯದ ಅಧ್ಯಕ್ಷ ಡಾ.ಕೆ.ರಾಜೇಂದ್ರ ಉಡುಪ ಅಧ್ಯಕ್ಷತೆ ವಹಿಸುವರು.

ಈ ಸಮ್ಮೇಳನದಲ್ಲಿ ಗಾಂಧಿ ‘150’ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದ್ದು, ಲೇಖಕ ಡಾ.ಜಿ.ಭಾಸ್ಕರ ಮಯ್ಯ ದಿಕ್ಸೂಚಿ ಭಾಷಣ ಮಾಡಲಿರುವರು. ವಿಚಾರ ಸಂಕಿರಣದಲ್ಲಿ ‘ಗಾಂಧಿ ಮತ್ತು ಹಿಂದ್ ಸ್ವರಾಜ್’ ಬಗ್ಗೆ ಸಹ ಪ್ರಾಧ್ಯಾಪಕ ಡಾ.ದಿನೇಶ್ ನಾಯಕ್, ‘ಗಾಂಧಿ ಮತ್ತು ಮಾರ್ಕ್ಸ್‌ವಾದ’ದ ಬಗ್ಗೆ ಪ್ರಗತಿಪರ ಚಿಂತಕರ ವೇದಿಕೆಯ ಕಾರ್ಯದರ್ಶಿ ಡಾ. ಕೃಷ್ಣಪ್ಪಕೊಂಚಾಡಿ, ‘ಗಾಂಧಿ ಮತ್ತು ಅಂಬೇಡ್ಕರ್’ಬಗ್ಗೆ ಉಪನ್ಯಾಸಕ ಡಾ. ವಾಸುದೇವ ಬೆಳ್ಳೆ ವಿಚಾರ ಮಂಡಿಸುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News