ಕೊಂಕಣಿ ಅಕಾಡಮಿಯ ಗೌರವ ಪ್ರಶಸ್ತಿ , ಪುಸ್ತಕ ಬಹುಮಾನ

Update: 2019-11-21 16:53 GMT

ಮಂಗಳೂರು, ನ.21:ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯು 2019ನೇ ಸಾಲಿನಲ್ಲಿ ಕೊಂಕಣಿ ಸಾಹಿತ್ಯ, ಕಲೆ, ಜಾನಪದ ವಿಭಾಗಗಳಲ್ಲಿ ಜೀವಮಾನದ ಸಾಧನೆಗಾಗಿ ಅರ್ಹರಿಂದ 2019ನೇ ಸಾಲಿನ ಗೌರವ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಿದೆ.

 ಈ ಪ್ರಶಸ್ತಿಯು 50,000 ರೂ. ಗೌರವ ಧನ, ಶಾಲು, ಸ್ಮರಣಿಕೆ, ಹಾರ, ಪ್ರಮಾಣ ಪತ್ರ, ಫಲತಾಂಬೂಲವನ್ನು ಒಳಗೊಂಡಿದೆ. ಸಾಧಕರು ನೇರವಾಗಿ ಅರ್ಜಿ ಸಲ್ಲಿಸಬಹುದು. ಸಂಘಸಂಸ್ಥೆಗಳು, ಸಾರ್ವಜನಿಕರೂ ಸಾಧಕರ ಹೆಸರು ಸೂಚಿಸಿ ಅರ್ಜಿ ಸಲ್ಲಿಸಬಹುದು.

2019ರ ಜನವರಿ 1ರಿಂದ ಡಿಸೆಂಬರ್ 31ರವರೆಗೆ ಪ್ರಕಟಗೊಂಡ ಕೊಂಕಣಿ ಕವನ, ಕೊಂಕಣಿ ಸಣ್ಣಕತೆ ಅಥವಾ ಕಾದಂಬರಿ, ಕೊಂಕಣಿಗೆ ಭಾಷಾಂತರಿಸಿದ ಕೃತಿ/ಲೇಖನ/ಅಧ್ಯಯನ/ವಿಮರ್ಶೆ ಬಗ್ಗೆ ಲೇಖಕರು/ಪ್ರಕಾಶಕರಿಂದ ಪುಸ್ತಕ ಬಹುಮಾನಕ್ಕಾಗಿ ಪುಸ್ತಕದ 4 ಪ್ರತಿಗಳ ಜೊತೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಪುಸ್ತಕ ಬಹುಮಾನವು 25,000 ರೂ. ಗೌರವ ಧನ, ಹಾರ, ಪ್ರಮಾಣ ಪತ್ರ, ಫಲತಾಂಬೂಲವನ್ನು ಒಳಗೊಂಡಿದೆ.

ಗೌರವ ಪ್ರಶಸ್ತಿಗೆ ಅರ್ಜಿ ಸಲ್ಲಿಸುವವರು ಲಕೋಟೆಯ ಮೇಲೆ ಕೊಂಕಣಿ ಅಕಾಡಮಿ ಗೌರವ ಪ್ರಶಸ್ತಿ-2019 ಹಾಗೂ ಪುಸ್ತಕ ಬಹುಮಾನಕ್ಕೆ ಅರ್ಜಿ ಸಲ್ಲಿಸುವವರು ಕೊಂಕಣಿ ಅಕಾಡಮಿ ಪುಸ್ತಕ ಬಹುಮಾನ -2019 ಎಂದು ಕಡ್ಡಾಯವಾಗಿ ಬರೆದು, ರಿಜಿಸ್ಟ್ರಾರ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ, ಮಹಾನಗರ ಪಾಲಿಕಾ ಕಟ್ಟಡ, ಲಾಲ್‌ಭಾಗ್, ಮಂಗಳೂರು 575003 ಈ ವಿಳಾಸಕ್ಕೆ ಡಿಸೆಂಬರ್ 31 ರೊಳಗೆ ಕಳುಹಿಸಬೇಕು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News