ಕ್ರೀಡೆ ಆರೋಗ್ಯಕರ ಮನೋರಂಜನೆ: ಡಾ. ವಿನಯ್ ಆಳ್ವ

Update: 2019-11-21 18:00 GMT

ಮೂಡುಬಿದಿರೆ: ಕ್ರೀಡಾಜ್ಯೋತಿಯು ಕತ್ತಲೆಯನ್ನು ದೂರ ಮಾಡುತ್ತದೆ. ವಿದ್ಯಾರ್ಥಿಗಳು ಮಾಡುವ ಪ್ರಮಾಣವು ಒಗ್ಗಟ್ಟು ಮತ್ತು ಸಾಮರಸ್ಯತೆಯನ್ನು ಸೂಚಿಸುತ್ತದೆ. ಕ್ರೀಡಾ ದಿನದ ಪ್ರತಿಯೊಂದು ವಿಚಾರಗಳು ಅದರದ್ದೇ ಆದ ಪ್ರಾಮುಖ್ಯತೆ ಮತ್ತು ಮಹತ್ವವನ್ನು ಹೊಂದಿದೆ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಡಾ. ವಿನಯ್ ಆಳ್ವ ಹೇಳಿದರು.

ಮೂಡುಬಿದಿರೆಯ ಸ್ವರಾಜ್ ಮೈದಾನದಲ್ಲಿ ನಡೆದ ಆಳ್ವಾಸ್ ಕನ್ನಡ ಮಾಧ್ಯಮ ಹಾಗೂ ಆಳ್ವಾಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗಳ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ಕ್ರೀಡೆಯು ಆರೋಗ್ಯಕರ ಮನೋರಂಜನೆ. ದೇಹದ ಸ್ವಾಸ್ಥ್ಯತೆಯೊಂದಿಗೆ ಮನಸಿಗೆ ಉಲ್ಲಾಸ ನೀಡುತ್ತದೆ. ಕ್ರೀಡೆಯು ಕಲಿಯುವುದಕ್ಕೆ ಮತ್ತು ಕಲಿಸುವುದಕ್ಕೆ ಒಂದು ಉತ್ತಮ ವೇದಿಕೆಯಾಗಿದೆ. ವಿದ್ಯಾರ್ಥಿಗಳು ಸೋಲು ಗೆಲುವಿನ ಪಾಠದೊಂದಿಗೆ ತಮ್ಮ ತಪ್ಪಿನ ಮೂಲಕವೇ ತಿದ್ದಿಕೊಳ್ಳುವ ಪ್ರಯತ್ನ ಪಡಲು ಸಾಧ್ಯ ಎಂದರು.

ಕ್ರೀಡಾ ಸಾಧಕ ವಿದ್ಯಾರ್ಥಿಗಳು ಕ್ರೀಡಾಜ್ಯೋತಿಯನ್ನು ಮುಖ್ಯ ಅತಿಥಿಗಳಿಗೆ ಹಸ್ತಾಂತರಿಸಿದರು. ಆಳ್ವಾಸ್ ಪ್ರೌಢಶಾಲಾ ಆಡಳಿತಾಧಿಕಾರಿ ಪ್ರಕಾಶ್ ಶೆಟ್ಟಿ, ಉಪ ಆಡಳಿತಾಧಿಕಾರಿ ಚೈತ್ರಾ ರೈ, ಆಳ್ವಾಸ್ ಸೆಂಟ್ರಲ್ ಸ್ಕೂಲ್‍ನ ಮುಖ್ಯೋಪಾಧ್ಯಾಯರಾದ ಮಹಮ್ಮದ್ ಶಫಿ, ವಿದ್ಯಾರ್ಥಿಕ್ಷೇಮಪಾಲನ ಅಧಿಕಾರಿ ಜಗನ್ನಾಥ್  ಉಪಸ್ಥಿತರಿದ್ದರು.

ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ವಿಜಯ ಟಿ ಮೂರ್ತಿ ಸ್ವಾಗತಿಸಿದರು. ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಪ್ರಶಾಂತ್ ಭಟ್ ವಂದಿಸಿದರು. ಶಿಕ್ಷಕಿ ಶೋಭಲತಾ ಆಳ್ವ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಿಂದ  ಆಕರ್ಷಕ ಪಥಸಂಚನಲ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News