ವಿಮಾನದಲ್ಲಿ ಅಸ್ವಸ್ಥನಾದ ವೃದ್ಧ ಪ್ರಯಾಣಿಕನ ಮೂತ್ರ ಹೀರಿ ಪ್ರಾಣ ರಕ್ಷಿಸಿದ ವೈದ್ಯ

Update: 2019-11-22 14:09 GMT
Photo: weibo

ಬೀಜಿಂಗ್: ಚೀನಾದ ಗುವಾಂಗ್‍ ಝೌನಿಂದ ನ್ಯೂಯಾರ್ಕ್‍ ಗೆ ಹೊರಟಿದ್ದ ಚೈನಾ ಸದರ್ನ್ ಏರ್‍ ವೇಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಹಿರಿಯ ನಾಗರಿಕರೊಬ್ಬರಿಗೆ ಮೂತ್ರ ಕಟ್ಟಿದ ಪರಿಣಾಮ ವಿಮಾನದಲ್ಲಿದ್ದ ವೈದ್ಯರೊಬ್ಬರು ಮೂತ್ರವನ್ನು ಟ್ಯೂಬ್ ಒಂದರ ಸಹಾಯದಿಂದ ತಮ್ಮ ಬಾಯಿಯ ಮೂಲಕ 30 ನಿಮಿಷಗಳ ಕಾಲ ಹೀರಿ ಹೊರ ಹಾಕಿ ಅವರ ಪ್ರಾಣ ಉಳಿಸಿದ್ದಾರೆ.

ವಿಮಾನ ತನ್ನ ನಿಲ್ದಾಣ ತಲುಪಲು ಆರು ಗಂಟೆಗಳಷ್ಟಿರುವಾಗ ಹಿರಿಯ ನಾಗರಿಕ ಅಸ್ವಸ್ಥರಾಗಿದ್ದರಲ್ಲದೆ ಬೆವರಿ ಹೋಗಿದ್ದರು ಹಾಗೂ ತಮಗೆ ಮೂತ್ರ ವಿಸರ್ಜಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದರು.

ವಿಮಾನದ ಸಿಬ್ಬಂದಿ ತಕ್ಷಣ ಅವರಿಗೊಂದು ತಾತ್ಕಾಲಿಕ ಹಾಸಿಗೆ ಏರ್ಪಾಟು ಮಾಡಿದರಲ್ಲದೆ ವೈದ್ಯಕೀಯ ಸಹಾಯ ಬೇಕೆಂದು  ಘೋಷಿಸಿದರು. ವಿಮಾನದಲ್ಲಿದ್ದ ವ್ಯಾಸ್ಕುಲಾರ್ ಸರ್ಜನ್ ಡಾ. ಝಂಗ್ ತಕ್ಷಣ ಮುಂದೆ ಬಂದರು. ಆ ವ್ಯಕ್ತಿಯ ಮೂತ್ರಕೋಶದಲ್ಲಿ  ಒಂದು ಲೀಟರ್ ಮೂತ್ರವಿದ್ದು ಅದನ್ನು ವಿಸರ್ಜಿಸಲು ಸಾಧ್ಯವಾಗುತ್ತಿಲ್ಲ ಎಂದು ಅರಿವಾಗುತ್ತಲೇ ವಿಮಾನದಲ್ಲಿ ಲಭ್ಯವಿದ್ದ ಪೋರ್ಟೇಬಲ್ ಆಕ್ಸಿಜನ್ ಮಾಸ್ಕ್, ಸಿರಿಂಜ್ ನೀಡಲ್, ಸ್ಟ್ರಾ ಹಾಗೂ ಟೇಪ್ ತೆಗೆದುಕೊಂಡರು. ಆರಂಭದಲ್ಲಿ ಸಿರಿಂಜ್ ಬಳಸಿ ಮೂತ್ರ ಹೊರಹಾಕಲು ಯತ್ನಿಸಿದರೂ ಸಾಧ್ಯವಾಗದೇ ಇದ್ದಾಗ ವೈದ್ಯ ಟ್ಯೂಬ್ ಒಂದರ ಸಹಾಯದಿಂದ ತನ್ನ ಬಾಯಿಯ ಮೂಲಕ ಮೂತ್ರವನ್ನು ಹೀರಲು ಆರಂಭಿಸಿದರು. ಮುಂದಿನ  37 ನಿಮಿಷಗಳಲ್ಲಿ ಅವರು ಸುಮಾರು 700ರಿಂದ 800 ಮಿಲಿಲೀಟರ್ ಮೂತ್ರ ಹೀರಿ ಹೊರ ಹಾಕಿದ್ದರು.

ವಿಮಾನ ಭೂಸ್ಪರ್ಶ ಮಾಡಿದ ನಂತರ ರೋಗಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News