ರೈಲ್ವೆ ಖಾಸಗೀಕರಣ ಇಲ್ಲ, ಆದರೆ… : ಕೇಂದ್ರ ಸಚಿವ ಹೇಳಿದ್ದು ಹೀಗೆ

Update: 2019-11-22 14:48 GMT
PTI

ಹೊಸದಿಲ್ಲಿ, ನ. 22: ಭಾರತೀಯ ರೈಲ್ವೆಯನ್ನು ಕೇಂದ್ರ ಸರಕಾರ ಖಾಸಗೀಕರಣಗೊಳಿಸುವುದಿಲ್ಲ. ಆದರೆ, ಪ್ರಯಾಣಿಕರಿಗೆ ಉತ್ತಮ ಸೌಕರ್ಯ ಒದಗಿಸಲು ಕೆಲವು ಸೇವೆಗಳನ್ನು ಮಾತ್ರ ಖಾಸಗಿ ಕಂಪೆನಿಗಳಿಗೆ ಹೊರಗುತ್ತಿಗೆ ನೀಡಲಾಗುವುದು ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ರಾಜ್ಯಸಭೆಯಲ್ಲಿ ಶುಕ್ರವಾರ ತಿಳಿಸಿದರು.

  ಪ್ರಶ್ನೋತ್ತರ ವೇಳೆಯಲ್ಲಿ ಸರಣಿ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಪಿಯೂಷ್ ಗೋಯಲ್, ಮುಂದಿನ 12 ವರ್ಷಗಳ ಕಾಲ ರೈಲ್ವೆಯ ಕಾರ್ಯ ನಿರ್ವಹಣೆಗೆ ಅಂದಾಜು 50 ಲಕ್ಷ ಕೋಟಿ ನಿಧಿ ಅಗತ್ಯವಿದೆ. ಇದನ್ನು ಒದಗಿಸಲು ಸಾಧ್ಯವಿಲ್ಲದೇ ಇರುವುದರಿಂದ ಕೇಂದ್ರ ಸರಕಾರ ಈ ನಿರ್ಧಾರ ತೆಗೆದುಕೊಂಡಿದೆ ಎಂದರು.

ಉತ್ತಮ ಸೇವೆ ಹಾಗೂ ಸೌಲಭ್ಯ ನೀಡುವುದು ನಮ್ಮ ಉದ್ದೇಶ. ಭಾರತೀಯ ರೈಲ್ವೆಯನ್ನು ಖಾಸಗೀಕರಣಗೊಳಿಸುವುದು ಅಲ್ಲ. ಭಾರತೀಯ ರೈಲ್ವೆ ಎಂದೆಂದಿಗೂ ಭಾರತದ ಸೊತ್ತಾಗಿರಲಿದೆ ಎಂದು ಗೋಯಲ್ ತಿಳಿಸಿದರು.

‘‘ನೂತನ ರೈಲುಗಳ ಸಂಚಾರ ಆರಂಭಿಸಲು ಹಾಗೂ ಉತ್ತಮ ಸೇವೆ ನೀಡಲು ಬೇಡಿಕೆ ವ್ಯಕ್ತವಾಗುತ್ತಿದೆ. ಮುಂದಿನ 12 ವರ್ಷ 50 ಲಕ್ಷ ಕೋಟಿ ರೂಪಾಯಿ ಒದಗಿಸುವುದು ಸರಕಾರಕ್ಕೆ ಸಾಧ್ಯವಾಗದು’’ ಎಂದು ಅವರು ಹೇಳಿದರು.

ನೂತನ ಸೌಲಭ್ಯ ಒದಗಿಸಲು ಹಾಗೂ ಪ್ರಯಾಣಿಕರ ನೂಕುನುಗ್ಗಲು ತಡೆಯಲು ಅಗತ್ಯವಿರುವ ಹೆಚ್ಚು ಹೂಡಿಕೆ ಹಾಗೂ ನೂರಾರು ಹೊಸ ರೈಲು ಸಂಚಾರದ ಆರಂಭ ಉಲ್ಲೇಖಿಸಿದ ಗೋಯಲ್, ಒಂದು ವೇಳೆ ಈ ಈಗಿರುವ ವ್ಯವಸ್ಥೆಯನ್ನು ಮುಂದುವರಿಸಲು ಹಾಗೂ ಹೂಡಿಕೆ ಮಾಡಲು ಖಾಸಗಿ ಕಂಪೆನಿಗಳು ಮಂದೆ ಬಂದರೂ ಭಾರತೀಯ ರೈಲ್ವೇ ಎಂದಿಂದಿಗೂ ಪ್ರಯಾಣಿಕರ ಸೊತ್ತಾಗಿರಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News