ಅವಧಿ ಮೀರಿದ ಚುನಾವಣಾ ಬಾಂಡ್ ಸ್ವೀಕರಿಸುವಂತೆ ಎಸ್‌ಬಿಐಗೆ ನಿರ್ದೇಶಿಸಿದ್ದ ಕೇಂದ್ರ ಸರಕಾರ !

Update: 2019-11-22 17:09 GMT
PTI

ಹೊಸದಿಲ್ಲಿ, ನ. 22: ಕರ್ನಾಟಕದಲ್ಲಿ 2018ರಲ್ಲಿ ನಡೆದ ವಿಧಾನ ಸಭೆ ಚುನಾವಣೆ ಬಳಿಕ ಹಣಕಾಸು ಸಚಿವಾಲಯದ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಹಾಗೂ ಹತ್ತು ಕೋಟಿ ರೂಪಾಯಿ ಮೌಲ್ಯದ ಅವಧಿ ಮೀರಿದ ಚುನಾವಣಾ ಬಾಂಡ್ ಅನ್ನು ಗುರುತಿಸದ ರಾಜಕೀಯ ಪಕ್ಷವೊಂದಕ್ಕೆ ದೇಣಿಗೆ ನೀಡಲು ಅವಕಾಶ ನೀಡಲಾಗಿದೆ. ರಾಜಕೀಯ ಪಕ್ಷ/ಪಕ್ಷಗಳ ಅವಧಿ ಮೀರಿದ ಚುನಾವಣಾ ಬಾಂಡ್ ಅನ್ನು ಸ್ವೀಕರಿಸುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ತಿಳಿಸಲಾಗಿತ್ತು ಎಂದು ಆರ್‌ಟಿಐ ಕಾರ್ಯಕರ್ತ ಕೊಮ್ಮದೂರು ಲೋಕೇಶ್ ಬಾತ್ರಾ (ನಿವೃತ್ತ) ಆರ್‌ಟಿಐ ಮೂಲಕ ಸಂಗ್ರಹಿಸಿದ ದಾಖಲೆಗಳನ್ನು ಆಧಾರವಾಗಿರಿಸಿ ನಿತಿನ್ ಸೇಥಿ huffingtonpost ಇಂಡಿಯಾ’ದಲ್ಲಿ ಬರೆದ ಸರಣಿ ವರದಿಯಲ್ಲಿ ಹೇಳಲಾಗಿದೆ.

ಕೆಲವರು 20 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್ ಹೊಂದಿದ್ದರು. ಇದರಲ್ಲಿ ಅರ್ಧ ಭಾಗ ಬಾಂಡ್ ಅನ್ನು 2018 ಮೇ 3ರಂದು ತರಲಾಗಿತ್ತು ಹಾಗೂ ಉಳಿದ ಅರ್ಧ ಭಾಗವನ್ನು 2018 ಮೇ 5ಂದು ತರಲಾಗಿತ್ತು ಎಂದು ಎಸ್‌ಬಿಐ ಹಣಕಾಸು ಸಚಿವಾಲಯಕ್ಕೆ 2018 ಮಾರ್ಚ್ 23ರಂದು ಬರೆದ ಪತ್ರದಲ್ಲಿ ಹೇಳಿದೆ.

ಚುನಾವಣಾ ಬಾಂಡ್‌ನ ಸರಕಾರಿ ನಿಯಮದಂತೆ ವಿತರಿಸಿದ 15 ಕ್ಯಾಲೆಂಡರ್ ದಿನಗಳ ಒಳಗೆ ಅದನ್ನು ಬ್ಯಾಂಕ್‌ನಲ್ಲಿ ಠೇವಣಿ ಮಾಡಬೇಕು. ಒಂದು ವೇಳೆ ಅವಧಿ ಮೀರಿದರೆ, ಆ ಬಾಂಡ್‌ನ ಹಣವನ್ನು ಪ್ರಧಾನ ಮಂತ್ರಿ ಅವರ ರಾಷ್ಟ್ರೀಯ ಪರಿಹಾರ ನಿಧಿಗೆ ನೀಡಬೇಕು.

“ಚುನಾವಣಾ ಬಾಂಡ್‌ಗಳನ್ನು 15 ಕ್ಯಾಲೆಂಡರ್ ದಿನಗಳ ಒಳಗೆ ಠೇವಣಿ ಮಾಡಬೇಕು ಎಂಬ ನಿಯಮ ಇದೆ. ಆದರೂ ಬಾಂಡ್ ಹೊಂದಿರುವವರು ನಾವು ಬಾಂಡ್ ಅನ್ನು ಕೆಲಸದ ಅವಧಿಯ 15 ದಿನಗಳ ಒಳಗೆ ಬ್ಯಾಂಕ್‌ನಲ್ಲಿ ಠೇವಣಿ ಮಾಡಿದ್ದೇವೆ. ಆದುದರಿಂದ ಅವಧಿ ಮೀರಿದ ಬಾಂಡ್ ಅನ್ನು ಸ್ವೀಕರಿಸಬೇಕು ಎಂದು ವಿನಂತಿಸಿದ್ದರು. ಈ ಹಿನ್ನೆಲೆಯಲ್ಲಿ ಬಾಂಡ್ ಸ್ವೀಕರಿಸಿದ್ದ ಹೊಸದಿಲ್ಲಿ ಬ್ರಾಂಚ್‌ನ ಪ್ರತಿನಿಧಿ ಎಸ್‌ಬಿಐ ಅಧ್ಯಕ್ಷ ರಜನೀಶ್ ಕುಮಾರ್ ಪರವಾಗಿ ಹಣಕಾಸು ಸಚಿವಾಲಯಕ್ಕೆ ಪತ್ರ ಬರೆದು ಈ ಚುನಾವಣಾ ಬಾಂಡ್‌ಗಳನ್ನು ಸ್ವೀಕರಿಸಬೇಕೇ ಎಂದು ಕೇಳಿದ್ದರು” ಎಂದು huffingtonpost ಇಂಡಿಯಾ ವರದಿ ಮಾಡಿದೆ.

  ಅದೇ ದಿನ ಸಚಿವಾಲಯದ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ. ನಿಯಮಗಳ ಬಗ್ಗೆ ಸ್ಪಷ್ಟನೆ ನೀಡಿದ ಆರ್ಥಿಕ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ವಿಜಯ್ ಕುಮಾರ್ ಬಾಂಡ್ ಸ್ವೀಕರಿಸುವ ಗಡು ಕ್ಯಾಲೆಂಡರ್ ಅವಧಿ ಹೊರತು, ಕೆಲಸದ ಅವಧಿ ಅಲ್ಲ. ಆದುದರಿಂದ ಬಾಂಡ್ ಅವಧಿ ಮೀರಿದೆ. ಆದರೆ, ತಾನು ಅದಕ್ಕೆ ವಿನಾಯತಿ ನೀಡಲು ಬಯಸುವುದಾಗಿ ತಿಳಿಸಿದ್ದರು. ಈ ಬಗ್ಗೆ ಬ್ಯಾಂಕ್‌ಗೆ ಪತ್ರ ರವಾನಿಸಿದ್ದರು. ಪತ್ರ ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಎಸ್.ಸಿ. ಗರ್ಗ್ ಅವರ ಅನುಮೋದನೆ ಪಡೆದಿತ್ತು ಎಂದು ‘huffingtonpost ಇಂಡಿಯಾ’ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News