ವಿಜ್ಞಾನ, ಗಣಿತ ಪರೀಕ್ಷೆ : ಕೋಡಿ ಬ್ಯಾರೀಸ್ ಶಾಲಾ ವಿದ್ಯಾರ್ಥಿಗಳ ಸಾಧನೆ

Update: 2019-11-22 17:13 GMT

ಕುಂದಾಪುರ, ನ.22: ‘ಟೀಮ್ ಡಿಸ್ಕವರಿ ಸ್ಕೂಲ್ ಸೂಪರ್ ಲೀಗ್- ಪವರ್ಡ್‌ ಬೈ ಬೈಜುಸ್’ ವತಿಯಿಂದ 4ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ನಡೆಸಲಾದ ವಿಜ್ಞಾನ ಹಾಗೂ ಗಣಿತ ಪರೀಕ್ಷೆಯಲ್ಲಿ ಕುಂದಾಪುರ ಕೋಡಿ ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಸ್ಕೂಲ್ ಸಿಬಿಎಸ್‌ಇ ಇಲ್ಲಿನ ವಿದ್ಯಾರ್ಥಿಗಳಾದ ಮೆಹೆಕ್ ಶುಕೂರ್, ಮೊಹಮ್ಮದ್ ಸುಹೈಮ್, ಸುರಯ್ಯಾ ಬಾನು, ತನ್ವಿ, ಹೈಫಾ ಹಸನ್, ಅಲಿಶಾ ಮೊಲನೇ ಸುತ್ತಿನಲ್ಲಿ ಉತ್ತೀರ್ಣರಾಗಿದ್ದಾರೆ.

 ಇವರಲ್ಲಿ 4ನೆ ತರಗತಿಯ ವಿದ್ಯಾರ್ಥಿನಿ ಮೆಹೆಕ್ ಶುಕೂರ್ ಹಾಗೂ 8ನೆ ತರಗತಿಯ ವಿದ್ಯಾರ್ಥಿನಿ ಹೈಫಾ ಹಸನ್ ಎರಡನೆ ಸುತ್ತಿಗೆ ಆಯ್ಕೆಯಾಗಿದ್ದಾರೆ. ಇವರನ್ನು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಅಬ್ದುಲ್ ರೆಹಮಾನ್ ಅಭಿನಂದಿಸಿದ್ದಾರೆ. ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಪ್ರೊ. ದೋಮ ಚಂದ್ರಶೇಖರ್ ಬೈಜುಸ್ ಸಂಸ್ಥೆಯವರು ನೀಡಿದ ಬಹುಮಾನವನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಸ್ಕೂಲ್‌ನ ಸಂಯೋಜಕಿ ಅಶ್ವಿನಿ ಶೆಟ್ಟಿ, ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಶಮೀರ್, ಬ್ಯಾರೀಸ್ ಡಿ.ಎಡ್. ಕಾಲೇಜಿನ ಪ್ರಾಂಶುಪಾಲೆ ಫಿರ್ದೊಸ್, ಹಾಜಿ ಕೆ.ಮೋಹಿದ್ದಿನ್ ಬ್ಯಾರಿ ಅನುದಾನಿತ ಪ್ರೌಢ ಶಾಲೆಯ ಮುಖ್ಯೋ ಪಾದ್ಯಾಯಿನಿ ಜಯಂತಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News