ರಾಜಕೀಯ ನಾಯಕರಿಂದ ಕ್ರೈಸ್ತ ಸಮುದಾಯದ ಮೇಲೆ ಗೂಬೆ ಕೂರಿಸುವ ಯತ್ನ ಬೇಡ: ಸಮುದಾಯದ ನಾಯಕರು
ಮಂಗಳೂರು, ನ.23: ಕ್ರೈಸ್ತ ಸಮುದಾಯದಿಂದಾಗಿಯೇ ನಿರ್ದಿಷ್ಟ ಅಭ್ಯರ್ಥಿಯ ಸೋಲಿಗೆ ಕಾರಣ ಎಂಬ ಮಾತುಗಳನ್ನು ಕೆಲ ರಾಜಕೀಯ ನಾಯಕರು ಹೇಳುವ ಮೂಲಕ ಸಮುದಾಯದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿರುವುದನ್ನು ಖಂಡಿಸುವುದಾಗಿ ಸಮುದಾಯದ ನಾಯಕರು ಹೇಳಿದ್ದಾರೆ.
ಕ್ರೈಸ್ತ ಸಮುದಾಯದ ವಿವಿಧ ಸಂಘಟನೆಗಳ ನಾಯಕರು ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರಾವಳಿ ಕೊಂಕಣ್ಸ್ ಅಧ್ಯಕ್ಷ ಲೆಸ್ಲಿ ರೇಗೋ, ಇತ್ತೀಚಿಗೆ ನಡೆದ ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕ್ರೈಸ್ತರು ಸ್ವತಂತ್ರ ಅಭ್ಯರ್ಥಿಗಳಾಗಿ ಕಣದಲ್ಲಿದ್ದ ಕಾರಣ ಪಕ್ಷದ ಅಭ್ಯರ್ಥಿಗಳಿಗೆ ತೊಂದರೆಯಾಗಿದೆ ಎಂದು ಕೆಲ ರಾಜಕೀಯ ನಾಯಕರು ಹೇಳಿಕೊಂಡಿದಾದರೆ. ಕ್ರೈಸ್ತ ಸಮುದಾಯದ ಮತಗಳು ನಿರ್ದಿಷ್ಟವಾದ ಒಂದೇ ಪರಾಜಕೀಯ ಪಕ್ಷಕ್ಕೆ ಸಿಗಬೇಕಗು. ಕ್ರೈಸ್ತ ಸಮುದಾಯಕ್ಕೆ ಸೇರಿದ ಸ್ವತಂತ್ರ ಅಭ್ಯರ್ಥಿಗಳಿಂದ ನಿರ್ದಿಷ್ಟ ಕೆಲ ರಾಜಕೀಯ ಪಕ್ಷಗಳಿಗೆ ತೊಂದರೆಯಾಗಿದೆ ಎಂಬ ಮಾತುಗಳು ಬೇಸರ ತಂದಿದೆ ಎಂದರು.
ಇತರ ಸಮುದಾಯದ ಸ್ವತಂತ್ರ ಅಭ್ಯರ್ಥಿಗಳು ನಾಮಪತ್ರ ಹಿಂತೆಗೆಯಲು ಮನವೊಲಿಸಲು ಯಾಕೆ ಪ್ರಯತ್ನಿಸಲಾಗಿಲ್ಲ ಎಂದು ಪ್ರಶ್ನಿಸಿದ ಅವರು, ಸಮುದಾಯದ ಶೇ. 90ರಷ್ಟು ನ ಮತದಾನದಲ್ಲಿ ಭಾಗವಹಿಸುತ್ತಾರೆ. ಹೀಗಾಗಿ ಕ್ರೈಸ್ತ ಸಮುದಾಯದ ಮತಗಳು ಚುನಾವಣೆಯಲ್ಲಿ ನಿರ್ಣಯಕ ಪಾತ್ರ ಎಂಬ ಮಾತು ಸತ್ಯ ಎಂದರು.
ಇಂದಿನ ರಾಜಕೀಯದಲ್ಲಿ ಗಂಡ, ಹೆಂಡತಿ, ಮಕ್ಕಳು ಪ್ರತ್ಯೇಕ ಪಕ್ಷದಲ್ಲಿ ಗುರುತಿಸಿಕೊಂಡಿರುವ ದಾಖಲೆಗಳಿವೆ. ಇಂತಹ ಸಮಯದಲ್ಲಿ ಒಂದೇ ಪಕ್ಷವನ್ನು ಸಮುದಾಯ ಬೆಂಬಲಿಸಬೇಕೆಂಬ ಮಾತು ಸಮಂಜಸವೇ. ಇತರ ಸಮುದಾಯದವರು ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಬಹುದಾದರೆ ಕ್ರೈಸ್ತ ಸಮುದಾಯದವರು ಸ್ವತಂತ್ರವಾಗಿ ಯಾಕೆ ಸ್ಪರ್ಧಿಸಬಾರದು. ಕ್ರೈಸ್ತ ಸಮುದಾಯ ದ.ಕ. ಹಾಗೂ ಉಡುಪಿ ಜಿಲ್ಲೆಗೆ ಮಾತ್ರ ಸೀಮಿತವಾಗಿಲ್ಲ. ಹಾಗಾಗಿ ರಾಜಕೀಯ ನಾಯಕರು ಕ್ರೈಸ್ತ ಸಮುದಾಯದ ಮೇಲೆ ವಿನಾಕಾರಣ ಆರೋಪ ಮಾಡುವುದು ಸರಿಯಲ್ಲ. ಕ್ರೈಸ್ತರು ಯಾವುದೇ ನಿರ್ದಿಷ್ಠ ವ್ಯಕ್ತಿಗೆ ಮತ ನೀಡಿ ಎಂದು ಕೇಳುವುದಿಲ್ಲ. ಉತ್ತಮ ಅಭ್ಯರ್ಥಿಗೆ ಮತ ಹಾಕಲು ಪ್ರೇರೇಪಿಸುತ್ತದೆ. ಹಾಗಾಗಿ ಜಾತಿ ಧರ್ಮದ ಆಧಾರದಲ್ಲಿ ಈ ರೀತಿಯ ಕಂದಕ ಸೃಷ್ಟಿಸುವ ವಾತಾವರಣ ನಿರ್ಮಿಸುವುದು ಸರಿಯಲ್ಲ ಎಂದು ಮಂಗಳೂರು ಪ್ರದೇಶ ಕೆಥೋಲಿಕ್ ಸಭಾದ ಅಧ್ಯಕ್ಷ ಪೌಲ್ ರೋಲ್ಫಿ ಡಿಕೋಸ್ತ ಹೇಳಿರು.
ಗೋಷ್ಠಿಯಲ್ಲಿ ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ಕಾರ್ಯದರ್ಶಿ ಎಂ.ಪಿ. ನೊರೊನ್ನಾ, ರಚನಾ ಅಧ್ಯಕ್ಷ ಎಲಿಯಾಸ್ ಸಾಂಗ್ತಿಸ್ ಉಪಸ್ಥಿತರಿದ್ದರು.