×
Ad

ಫೆವಿಕಾಲ್ ಹಚ್ಚಿ ಅಧಿಕಾರದ ಕುರ್ಚಿಯಲ್ಲಿ ಕುಳಿತುಕೊಳ್ಳಿ: ಬಿಜೆಪಿಗೆ ಉದ್ಧವ್ ಠಾಕ್ರೆ

Update: 2019-11-23 17:03 IST

ಹೊಸದಿಲ್ಲಿ, ನ.23: ಮಹಾರಾಷ್ಟ್ರದಲ್ಲಿ ಇಂದು ಮುಂಜಾನೆಯ ಅಚ್ಚರಿಯ ಬೆಳವಣಿಗೆಯಲ್ಲಿ ದೇವೇಂದ್ರ ಫಡ್ನವಿಸ್ ಅವರು ಮುಖ್ಯಮಂತ್ರಿಯಾಗಿ ಹಾಗೂ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಘಟನೆಯನ್ನು 'ಮಹಾರಾಷ್ಟ್ರದ ಮೇಲೆ ನಡೆಸಿದ ಸರ್ಜಿಕಲ್ ದಾಳಿ' ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಬಣ್ಣಿಸಿದ್ದಾರೆ.

ಬಿಜೆಪಿ ಪಕ್ಷದವರು "ಫೆವಿಕಾಲ್ ಹಚ್ಚಿ ಅಧಿಕಾರದ ಕುರ್ಚಿಯಲ್ಲಿ ಕುಳಿತುಕೊಳ್ಳಬೇಕು" ಎಂದು ಹೇಳಿದರು. ಅಜಿತ್ ಪವಾರ್ ಅವರು ಬಿಜೆಪಿ ಜತೆ ಕೈಜೋಡಿಸಿರುವುದು ಸಂವಿಧಾನಕ್ಕೆ ಹಾಗೂ ಜನರ ತೀರ್ಪಿಗೆ ತೋರಿದ ಅಗೌರವವಾಗಿದೆ ಎಂದೂ ಠಾಕ್ರೆ ಹೇಳಿದ್ದಾರೆ.

"ಪ್ರಜಾಪ್ರಭುತ್ವದ ಹೆಸರಿನಲ್ಲಿ ನಡೆದ ಈ ಮಕ್ಕಳಾಟ ನಗೆಪಾಟಲಿಗೀಡಾಗಿದೆ. ಇದರ ನಂತರ ಇನ್ನು ಚುನಾವಣೆಗಳನ್ನು ಘೋಷಿಸಬಾರದು ಎಂದು ಅನಿಸುತ್ತದೆ. ಇದು  ಮಹಾರಾಷ್ಟ್ರದ ಮೇಲಿನ ಸರ್ಜಿಕಲ್ ದಾಳಿ, ಶಿಸ್ತುಕ್ರಮದ ಕುರಿತಂತೆ ನಿರ್ಧರಿಸುತ್ತೇವೆ'' ಎಂದು ಮುಂಬೈಯಲ್ಲಿಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಉದ್ಧವ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News