ನ. 25 ರಂದು ಕಿಲ್ಲೂರಿನಲ್ಲಿ ಆಧ್ಯಾತ್ಮಿಕ ಮಜ್ಲಿಸ್

Update: 2019-11-23 14:54 GMT

ಬೆಳ್ತಂಗಡಿ: ಜಂಇಯ್ಯತು ಮಿಸ್ಬಾಹಿಲ್ ಹುದಾ ಕಿಲ್ಲೂರು ಇದರ 20ನೇ ವಾರ್ಷಿಕ ಮಹಾ ಸಭೆ ಹಾಗೂ ಆಧ್ಯಾತ್ಮಿಕ ಮಜ್ಲಿಸ್ ನ. 25ರಂದು ಬೆಳಗ್ಗೆ 9:30 ರಿಂದ ಸಂಜೆ ತನಕ ದಾರುಶ್ಶರೀಫ್ ಕಿಲ್ಲೂರಿನಲ್ಲಿ ನಡೆಯಲಿದೆ.

ಈ ಸಂದರ್ಭ ಮೌಲಿದ್ ಪಾರಾಯಣ, ಬುರ್ದಾ ಮಜ್ಲಿಸ್, ಖತ್ಮುಲ್ ಖುರ್ ಆನ್ ಹಾಗೂ ನಸೀಹತ್ ಮಜ್ಲಿಸ್ ಮುಂತಾದವುಗಳನ್ನೊಳಗೊಂಡ ಈ ಆಧ್ಯಾತ್ಮಿಕ ಸಂಗಮದಲ್ಲಿ ಕಾಜೂರು ತಂಙಳ್, ಕಿಲ್ಲೂರು ತಂಙಳ್, ಕುಕ್ಕಾಜೆ ತಂಙಳ್, ಝೈನುಲ್ ಉಲಮಾ ಮಾಣಿ ಉಸ್ತಾದ್, ಅಬೂಸ್ವಾಲಿಹ್ ಮದನಿ, ಪೆರ್ನೆ ಉಸ್ತಾದ್ ಹಾಗು ಇತರರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News