×
Ad

ಕೆಎಸ್‌ಸಿಎ ಕ್ರಿಕೆಟ್: ಮಾಧವ ಕೃಪಾ ಶಾಲೆಗೆ ಜಯ

Update: 2019-11-23 20:37 IST

ಮಣಿಪಾಲ ನ.23: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಶ್ರಯದಲ್ಲಿ ಮಣಿಪಾಲದಲ್ಲಿ ನಡೆದಿರುವ ಉಡುಪಿ ಜಿಲ್ಲಾ ಮಟ್ಟದ ಅಂತರ್ ಪದವಿ ಪೂರ್ವ ಕಾಲೇಜು ಲೀಗ್ ಕಂ ನಾಕೌಟ್ ಕ್ರಿಕೆಟ್ ಪಂದ್ಯಾಟದಲ್ಲಿ ಮಣಿಪಾಲದ ಮಾಧವ ಕೃಪಾ ಹಾಗೂ ಉಡುಪಿಯ ಸ್ನೇಹ ಕಾಲೇಜು ತಂಡಗಳು ಜಯ ದಾಖಲಿವೆ.

ಇಲ್ಲಿನ ಎಂಡ್ ಪಾಯಿಂಟ್ ಮೈದಾನದಲ್ಲಿ ಇಂದು ಜರಗಿದ ತಲಾ 50 ಓವರುಗಳ ಪಂದ್ಯದಲ್ಲಿ ಉಡುಪಿಯ ಸ್ನೇಹ ಪ.ಪೂ.ಕಾಲೇಜು ತಂಡ, ಶಾರದಾ ರೆಸಿಡೆನ್ಸಿಯಲ್ ಪಿಯು ಕಾಲೇಜು ತಂಡವನ್ನು 9 ವಿಕೆಟ್‌ಗಳಿಂದ ಪರಾಭವ ಗೊಳಿಸಿತು.

ಮೊದಲು ಬ್ಯಾಟಿಂಗ್ ನಡೆಸಿದ ಶಾರದಾ ಕಾಲೇಜು ತಂಡ ಕೇವಲ 10 ಓವರುಗಳಲ್ಲಿ 33 ರನ್‌ಗಳಿಗೆ ಆಲೌಟಾಯಿತು. ತಂಡದ ಎಂಟು ಮಂದಿ ರನ್ ಖಾತೆ ತೆರೆಯದೇ ಔಟಾದರು. ಸ್ನೇಹ ಕಾಲೇಜು ತಂಡದ ಆಶೀಷ್ 14ಕ್ಕೆ 5 ಮತ್ತು ಹೃತಿಕ್ 14ಕ್ಕೆ 5 ವಿಕೆಟ್‌ಗಳನ್ನು ಪಡೆದರು. ಸ್ನೇಹ ತಂಡವು ಒಂದು ವಿಕೆಟ್ ನಷ್ಟಕ್ಕೆ ವಿಜಯದ ಗುರಿ ತಲುಪಿತು.

ಮೊದಲು ಬ್ಯಾಟಿಂಗ್ ನಡೆಸಿದ ಶಾರದಾ ಕಾಲೇಜು ತಂಡ ಕೇವಲ 10 ಓವರುಗಳಲ್ಲಿ 33 ರನ್‌ಗಳಿಗೆ ಆಲೌಟಾಯಿತು. ತಂಡದ ಎಂಟು ಮಂದಿ ರನ್ ಖಾತೆ ತೆರೆಯದೇ ಔಟಾದರು. ಸ್ನೇಹ ಕಾಲೇಜು ತಂಡದ ಆಶೀಷ್ 14ಕ್ಕೆ 5 ಮತ್ತು ಹೃತಿಕ್ 14ಕ್ಕೆ 5 ವಿಕೆಟ್‌ಗಳನ್ನು ಪಡೆದರು. ಸ್ನೇಹ ತಂಡವು ಒಂದು ವಿಕೆಟ್ ನಷ್ಟಕ್ಕೆ ವಿಜಯದ ಗುರಿ ತಲುಪಿತು. ಮತ್ತೊಂದು ಪಂದ್ಯದಲ್ಲಿ ಮಾಧವಕೃಪಾ ಪ.ಪೂ.ಕಾಲೇಜು, ಉಡುಪಿಯ ಎಂಜಿಎಂ ಪ.ಪೂ.ಕಾಲೇಜನ್ನು ಪರಾಭವಗೊಳಿಸಿತು. ಮೊದಲು ಬ್ಯಾಟಿಂಗ್ ನಡೆಸಿದ ಮಾಧವ ಕೃಪಾ ತಂಡ 17 ಓವರುಗಳಲ್ಲಿ 47 ರನ್‌ಗೆ ಆಲೌಟಾದರೆ, ನಂತರ ಎದುರಾಳಿಯನ್ನು 40ರನ್‌ಗಳಿಗೆ ನಿುಂತ್ರಿಸಿ 7 ರನ್‌ಗಳ ಜಯ ದಾಖಲಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News