ಪಿಯುಸಿ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಗಾರ
Update: 2019-11-23 20:44 IST
ಉಡುಪಿ ನ.23: ಉಡುಪಿಯ ತ್ರಿಶಾ ಕ್ಲಾಸಸ್ ವತಿಯಿಂದ ಪಿ.ಯು.ಸಿ. ನಂತರ ಮುಂದೇನು ಮತ್ತು ಬೋರ್ಡ್ ಪರೀಕ್ಷೆಯಲ್ಲಿ ಹೇಗೆ ಅಂಕ ಗಳಿಸುವುದು ಎಂಬ ವಿಷಯದ ಕುರಿತು ಮಾಹಿತಿ ಕಾರ್ಯಗಾರವನ್ನು ಉಡುಪಿಯ ಕಿದಿಯೂರು ಹೋಟೆಲ್‌ನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಎಂ.ಹೆಗ್ಡೆ ಪರೀಕ್ಷೆ ಬರೆಯುವ ಕುರಿತು ಮತ್ತು ತ್ರಿಶಾ ಗ್ರೂಫ್ ಆಫ್ ಇಸ್ಟಿಟ್ಯೂಷನ್ಸ್‌ನ ಸಂಸ್ಥಾಪಕ ಸಿಎ ಗೋಪಾಲಕೃಷ್ಣ ಭಟ್ ಪಿ.ಯು.ಸಿ. ನಂತರ ಮುಂದೇನು ಎಂಬ ವಿಷಯದ ಬಗ್ಗೆ ಮಾಹಿತಿ ನೀಡಿದರು.
ತ್ರಿಶಾ ಸಂಸ್ಥೆಯ ಉಪಾಧ್ಯಕ್ಷ ನಿತಿನ್ ಭಟ್ ಮಾತನಾಡಿದರು. ಉಪನ್ಯಾಸಕಿ ಐಶ್ವರ್ಯ ಕಾರ್ಯಕ್ರಮ ನಿರೂಪಿಸಿದರು. ತ್ರಿಶಾ ಕ್ಲಾಸಸ್‌ನ ಸೆಂಟರ್ ಹೆಡ್ ಪ್ರತಿಭಾ ನಾಯಕ್ ವಂದಿಸಿದರು. ಸಂಸ್ಥೆಯ ಟ್ರಸ್ಟಿ ನಮಿತಾ ಜಿ.ಭಟ್ ಉಪಸ್ಥಿತರಿದ್ದರು. ಕಾರ್ಯಗಾರದಲ್ಲಿ ಸುಮಾರು 250ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ವುತ್ತು ಪೊಷಕರು ಭಾಗವಹಿಸಿದ್ದರು