×
Ad

ಚೊಕ್ಕಬೆಟ್ಟು: ಎಸ್‌ಡಿಪಿಐ ಅಭಿನಂದನಾ ಕಾರ್ಯಕ್ರಮ

Update: 2019-11-23 21:04 IST

 ಮಂಗಳೂರು, ನ.23: ಮಂಗಳೂರು ಮನಪಾ ಚುನಾವಣೆಯಲ್ಲಿ ಜಯಗಳಿಸಿದ ಎಸ್‌ಡಿಪಿಐ ಅಭ್ಯರ್ಥಿಗಳಿಗೆ ಹಾಗೂ ಮತದಾರರಿಗೆ ಅಭಿನಂದನಾ ಕಾರ್ಯಕ್ರಮವು ಶುಕ್ರವಾರ ಚೊಕ್ಕಬೆಟ್ಟು ಎಂಜೆಎಂ ಹಾಲ್ ನಲ್ಲಿ ಶುಕ್ರವಾರ ನಡೆಯಿತು.

ಈ ಸಂಧರ್ಭ ಕಾಟಿಪಳ್ಳ ಉತ್ತರ 5ನೇ ವಾರ್ಡ್‌ನಿಂದ ಜಯಗಳಿಸಿದ ಸಂಶಾದ್ ಅಬೂಬಕರ್ ಹಾಗೂ ಬೆಂಗರೆ 60ನೆ ವಾರ್ಡ್‌ನಿಂದ ವಿಜೇತರಾದ ಮುನೀಬ್ ಬೆಂಗ್ರೆ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಸ್‌ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ದಿಕ್ಸೂಚಿ ಭಾಷಣಗೈದರು. ಪಿಎಫ್‌ಐ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಶಾಕಿಬ್ ಮುಖ್ಯಭಾಷಣಗೈದರು.

ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್, ರಾಷ್ಟ್ರೀಯ ಕಾರ್ಯದರ್ಶಿ ಅಲ್ಪೋನ್ಸೋ ಫ್ರಾಂಕೋ ಮಾತನಾಡಿದರು. ವುಮೆನ್ ಇಂಡಿಯಾ ಮೂವ್‌ಮೆಂಟ್ ಇದರ ರಾಜ್ಯಾಧ್ಯಕ್ಷೆ ಶಾಹಿದಾ ತಸ್ನೀಮ್, ವುಮೆನ್ ಇಂಡಿಯಾ ಮೂವ್‌ಮೆಂಟ್‌ನ ಜಿಲ್ಲಾಧ್ಯಕ್ಷೆ ನಸ್ರಿಯಾ ಬೆಳ್ಳಾರೆ ಮುಖ್ಯ ಅತಿಥಿಗಳಾಗಿದ್ದರು.

ವೇದಿಕೆಯಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷ ಅಡ್ವಕೇಟ್ ಅಬ್ದುಲ್ ಮಜೀದ್, ರಾಜ್ಯ ಕಾರ್ಯದರ್ಶಿಗಳಾದ ಅಕ್ರಮ್ ಹಸನ್, ಅಶ್ರಫ್ ಮಾಚಾರ್, ರಾಜ್ಯ ಕಾರ್ಯದರ್ಶಿ ಅಬ್ದುಲ್ ಜಲೀಲ್ ಉಪಸ್ಥಿತರಿದ್ದರು. ಈ ಸಂದರ್ಭ 30ಕ್ಕೂ ಹೆಚ್ಚು ಅಧಿಕ ಪಕ್ಷಕ್ಕೆ ಸೇರ್ಪಡೆಗೊಂಡರು.

ಉಮರ್ ಫಾರೂಕ್ ಕಾರ್ಯಕ್ರಮ ನಿರೂಪಿಸಿದರು. ಅಝರ್ ಚೊಕ್ಕಬೆಟ್ಟು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News