×
Ad

ನ.25ರಿಂದ ಪೇಜಾವರರಿಂದ ಉಪನ್ಯಾಸ ಮಾಲಿಕೆ

Update: 2019-11-23 21:08 IST

ಮಂಗಳೂರು, ನ.23: ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಅವರಿಂದ ‘ರಾಮಾಯಣದ ವ್ಯಕ್ತಿ ಪರಿಚಯ’ ವಿಷಯದ ಕುರಿತಾಗಿ ಉಪನ್ಯಾಸ ಮಾಲಿಕೆಯನ್ನು ಆಯೋಜಿಸಲಾಗಿದೆ.

ನ.25ರಿಂದ 29ರವರೆಗೆ ನಗರದ ಕದ್ರಿ ಮಲ್ಲಿಕಟ್ಟೆಯ ಶ್ರೀಕೃಷ್ಣ ಕಲ್ಯಾಣ ಮಂದಿರದಲ್ಲಿ ಪ್ರತಿದಿನ ಸಂಜೆ 5:30ರಿಂದ 7ರವರೆಗೆ ಪೇಜಾವರ ಶ್ರೀಗಳು ಉಪನ್ಯಾಸ ನೀಡಲಿದ್ದಾರೆ.

ಸಂಜೆ 5ರಿಂದ ಭಜನೆ, 5:30ರಿಂದ ಉಪನ್ಯಾಸ, 7 ಗಂಟೆಗೆ ಪೂಜೆ ನೆರವೇರಲಿದೆ ಎಂದು ಎಸ್.ಪ್ರದೀಪ ಕುಮಾರ ಕಲ್ಕೂರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News