ಅಕ್ರಮ ಮರಳು ಸಾಗಾಟ: ಎರಡು ಲಾರಿ, ಕಾರು ವಶ
Update: 2019-11-23 22:13 IST
ಕಾಪು, ನ.23: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಎರಡು ಲಾರಿಗಳು ಮತ್ತು ಅದಕ್ಕೆ ಬೆಂಗಾವಲಾಗಿ ಬಂದ ಕಾರನ್ನು ಕಾಪು ಪೊಲೀಸರು ನ.22ರಂದು ಬೆಳಗಿನ ಜಾವ ಮೂಳೂರು -ಬೆಳಪು ರಸ್ತೆಯ ಮಂತಿಮಾರ್ ಜಂಕ್ಷನ್ ಬಳಿ ವಶಪಡಿಸಿ ಕೊಂಡಿದ್ದಾರೆ.
ಮಂಗಳೂರಿನ ಉಳ್ಳಾಲದಿಂದ ಎರಡು ಲಾರಿಗಳಲ್ಲಿ ಅಕ್ರಮವಾಗಿ ಮರಳನ್ನು ಕಾರಿನ ಬೆಂಗಾವಲಿನಲ್ಲಿ ಸಾಗಿಸುತ್ತಿದ್ದು, ಬೆಳಪು ಕಡೆಯಿಂದ ಮೂಳೂರು ಕಡೆಗೆ ಬರುತ್ತಿದ್ದ ಲಾರಿಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.
ಲಾರಿ ಚಾಲಕರುಗಳಾದ ರಘು ಮತ್ತು ತಬ್ರೇಜ್, ಕಾರಿನಲ್ಲಿದ್ದ ಅಬ್ದುಲ್ ರೆಹಮಾನ್ ಎಂಬವರನ್ನು ಮತ್ತು ಎರಡು ಲಾರಿಯಲ್ಲಿದ್ದ ತಲಾ 10,000ರೂ. ಮೌಲ್ಯ 10 ಟನ್ ಮರಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಾರಿ ನಲ್ಲಿದ್ದ ಹಮೀದ್ ಎಂಬಾತ ಪರಾರಿಯಾಗಿದ್ದಾನೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.