ಸಿದ್ದಕಟ್ಟೆ ಪ.ಪೂ. ಕಾಲೇಜ್ ಅಭಿವೃದ್ಧಿಗೆ 1ಕೋಟಿ ರೂ.: ಶಾಸಕ ರಾಜೇಶ್ ನಾಯ್ಕ್
ಬಂಟ್ವಾಳ, ನ. 23: ಸಿದ್ಧಕಟ್ಟೆ ಪದವಿ ಪೂರ್ವ ಕಾಲೇಜಿಗೆ ಅತ್ಯವಶಕವಾಗಿರುವ ಹೆಚ್ಚುವರಿ ಕೊಠಡಿ, ಪ್ರಯೋಗಾಲಯ ಕೋಠಡಿ, ಶೌಚಾಲಯ ಸಮೇತ ಒಟ್ಟಿಗೆ 1 ಕೋಟಿ ರೂ. ಸರಕಾರದಿಂದ ಮಂಜೂರಾತಿಯಾಗಿ ಕಾಮಗಾರಿ ಲೋಕೋಪಯೋಗಿ ಇಲಾಖೆಯ ಟೆಂಡರ್ ಹಂತದಲ್ಲಿದ್ದು ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ, ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಹೇಳಿದ್ದಾರೆ.
ಅವರು ಸಿದ್ದಕಟ್ಟೆ ಪದವಿ ಪೂರ್ವ ಕಾಲೇಜಿನ 2019-20ನೇ ಸಾಲಿನ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತಿ ಆಗಲಿರುವ ಉಪನ್ಯಾಸಕಿ ವಸಂತಿ ವಿ. ಅವರ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಭಾಕರ ಪ್ರಭು ಮಾತನಾಡಿ, ದೇಶದ ಭವಿಷ್ಯ ಯುವಜನತೆಯ ಕೈಯಲ್ಲಿದ್ದು, ಯುವಜನತೆಯ ನಿರ್ಮಾಣ ಕಾಲೇಜಿನ ಕ್ಯಾಂಪಸ್‍ನಲ್ಲಿ ಆಗುತ್ತಿದೆ. ಜಾತಿ ಮತ ಭೇದವಿಲ್ಲದೆ ಯುವ ಜನತೆ ವಿದ್ಯೆಯೇ ಜಾತಿ ಎಂದೂ ಮನಗಂಡು, ರಾಷ್ಟ್ರ ಪ್ರೇಮದೊಂದಿಗೆ ಧನಾತ್ಮಕವಾಗಿ ಮುಂದುವರಿದಾಗ ಭಾರತ ದೇಶ ಜಗತಿಗೆ ಮಾದರಿಯಾಗಲಿದೆ ಎಂದರು.
ನಿವೃತ್ತಿಯಾಗಲಿರುವ ಉಪಾನ್ಯಾಸಕಿ ವಸಂತಿ ವಿ. ಅವರನ್ನು ಶಾಸಕರು ಸನ್ಮಾನಿಸಿ ಶುಭ ಹಾರೈಸಿದರು. ಕಾಲೇಜಿಗೆ ಸಹಕಾರ ನೀಡಿದ ಸಮಿತಿ ಸದಸ್ಯರಾದ ಹೇಮಚಂದ್ರ ಗೌಡ, ನೋಣಯ್ಯ ಶೆಟ್ಟಿಗಾರ್ ಮತ್ತು 2018-19ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ 100ಕ್ಕೆ 100 ಅಂಕಗಳಿಸಿ ಸರಕಾರಿ ಕಾಲೇಜು ಮಟ್ಟದಲ್ಲಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಗಳಿಸಿಕೊಟ್ಟ 6 ವಿದ್ಯಾರ್ಥಿಗಳನ್ನು ಶಾಸಕರು ಅಭಿನಂದಿಸಿದರು. ಕಾಲೇಜಿನ ಪ್ರಾಂಶುಪಾಲರು ಉದಯ ಕುಮಾರ್ ವರದಿ ವಾಚಿಸಿದರು.
ಕಾರ್ಯಕ್ರಮದಲ್ಲಿ ಸಂಗಬೆಟ್ಟು ಗ್ರಾಪಂ ಅಧ್ಯಕ್ಷೆ ಗುಲಾಬಿ ಶೆಟ್ಟಿ, ನಿವೃತ್ತ ಪ್ರಾಂಶುಪಾಲ ಪದ್ಮನಾಭ ರೈ, ಮಾಜಿ ಎಪಿಎಂಸಿ ಸದಸ್ಯ ರತ್ನ ಕುಮಾರ್ ಚೌಟ, ಗ್ರಾಪಂ ಸದಸ್ಯರಾದ ಎಸ್.ಪಿ. ಶ್ರೀಧರ್, ಬೇಬಿ ಪೂಜಾರಿ, ಪದವಿ ಕಾಲೇಜಿನ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಸಂದೇಶ್ ಶೆಟ್ಟಿ, ನಿವೃತ್ತ ಶಿಕ್ಷಕ ಕೆ.ನಾರಾಯಣ ನಾಯಕ್, ಗೋವಿಂದ ಭಟ್, ಕಾಲೇಜಿ ಅಭಿವೃದ್ಧಿ ಸಮಿತಿಯ ಸದಸ್ಯರಾದ ಪ್ರಪುಲ್ಲ ರೈ, ಸುದೀಪ್ ಕುಮಾರ್ ಜೈನ್, ಮಂದರತಿ ಎಸ್.ಶೆಟ್ಟಿ, ವಸಂತಿ ಶೆಟ್ಟಿ ಅಚ್ಯುತ ಆಚಾರ್ಯ, ರಾಜೇಂದ್ರ ನೆಟ್ಲಾಜೆ, ಯೋಗೀಶ್ ಕರ್ಪೆ, ಸೀತಾರಾಮ ಶೆಟ್ಟಿ, ಉಮನಾಥ ನಾಯಕ್, ಪ್ರೌಢಶಾಲಾ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಉಮೇಶ್ ಗೌಡ, ಕೊಯಿಲ ಪ್ರೌಢ ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ದುರ್ಗಾದಾಸ್ ಶೆಟ್ಟಿ ಮಾವಂತೂರು, ಉಮೇಶ್ ಅರಳ, ವಿದ್ಯಾರ್ಥಿ ನಾಯಕ ಪವನ್‍ರಾಜ್ ಉಪಸ್ಥಿತರಿದ್ದರು.
ಹಿರಿಯ ಉಪನ್ಯಾಸಕ ಶ್ರೀನಿವಾಸ ನಾಯಕ್ ಸ್ವಾಗತಿಸಿದರು. ಉಪನ್ಯಾಸಕ ಶೀನಪ್ಪ ವಂದಿಸಿ, ಉಪನ್ಯಾಸಕ ಸಂಜಯ್ ಬಿ.ಎಸ್. ಕಾರ್ಯಕ್ರಮ ನಿರೂಪಿಸಿದರು.