×
Ad

ಸರಕಾರ ರಚನೆಗೆ ಪಕ್ಷಗಳಿಗೆ ಆಹ್ವಾನ ರಾಜ್ಯಪಾಲರ ವಿಶಿಷ್ಟಾಧಿಕಾರ

Update: 2019-11-23 22:29 IST

ಲಕ್ನೋ, ನ.23: ಪಕ್ಷವೊಂದನ್ನು ಸರಕಾರ ರಚನೆಗೆ ಆಹ್ವಾನಿಸುವುದು ರಾಜ್ಯಪಾಲರ ವಿಶಿಷ್ಟಾಧಿಕಾರವಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಶನಿವಾರ ಇಲ್ಲಿ ಹೇಳಿದರು.

ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿಯ ದೇವೇಂದ್ರ ಫಡ್ನವೀಸ್ ಮತ್ತು ಉಪ ಮುಖ್ಯಮಂತ್ರಿಯಾಗಿ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರು ಪ್ರಮಾಣ ವಚನಗಳನ್ನು ಸ್ವೀಕರಿಸಿದ ಬಳಿಕ ಸಿಂಗ್ ಅವರ ಈ ಹೇಳಿಕೆ ಹೊರಬಿದ್ದಿದೆ.

ಇಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಂಗ್,ಈ ಸಂದರ್ಭದಲ್ಲಿ ಯಾವುದೇ ರಾಜಕೀಯ ಹೇಳಿಕೆ ನೀಡಲು ತಾನು ಬಯಸುವುದಿಲ್ಲ. ಯಾವುದೇ ಪಕ್ಷವನ್ನು ಸರಕಾರ ರಚನೆಗೆ ಆಹ್ವಾನಿಸುವುದು ರಾಜ್ಯಪಾಲರ ವಿಶಿಷ್ಟಾಧಿಕಾರವಾ ಗಿದೆ ಎಂದರು.

ಕಾರ್ಯಕ್ರಮದಲ್ಲಿ ಲಕ್ನೋದ ಮಾಜಿ ಯೋಧರು ಮತ್ತು ಅವರ ಕುಟುಂಬಗಳಿಗೆ ಗೌರವ ಸಲ್ಲಿಸಿದ ಸಿಂಗ್,ದೇಶವು ಅವರ ಬಗ್ಗೆ ಹೆಮ್ಮೆಯನ್ನು ಹೊಂದಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News