×
Ad

ವಿದ್ಯಾರ್ಥಿಗಳು ದೇಶದ ಇತಿಹಾಸ ಅರಿಯುವುದರೊಂದಿಗೆ ಜ್ಞಾನ ವೃದ್ಧಿಸಿ: ಲೋಕಾಯುಕ್ತ ವಿಶ್ವನಾಥ್ ಶೆಟ್ಟಿ

Update: 2019-11-23 22:34 IST

ಕೊಣಾಜೆ : ಯುವ ಶಕ್ತಿಗಳು ದೇಶದ ಇತಿಹಾಸವನ್ನು ಆಳವಾಗಿ ಅಧ್ಯಯನ ಮಾಡಿ ಜ್ಞಾನ ವೃದ್ಧಿಸಿಕೊಳ್ಳಬೇಕಾಗಿದೆ ಎಂದು ಕರ್ನಾಟಕ ಲೋಕಾಯುಕ್ತರಾದ ಜಸ್ಟೀಸ್ ಪರೋಡಿ ವಿಶ್ವನಾಥ್ ಶೆಟ್ಟಿ ಹೇಳಿದರು.

ನಿಟ್ಟೆ ಎಜಕೇಶನಲ್ ಟ್ರಸ್ಟ್ ನ ಅಂಗವಾದ ನಿಟ್ಟೆ ಡಾ.ಶಂಕರ ಅಡ್ಯಂತಾಯ ಸ್ಮಾರಕ ಪದವಿ ಪೂರ್ವ ಕಾಲೇಜಿನ  21 ನೇ ವಾರ್ಷಿಕ ದಿನಾಚರಣೆಯನ್ನು ಶನಿವಾರ  ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಉತ್ತಮ ಭವಿಷ್ಯ ಕಟ್ಟಿ‌ಕೊಳ್ಳಿ. ಮುಂದೊಂದು ದಿನ ನಿಮಗೆ ಯಶಸ್ಸು ಖಂಡಿತವಾಗಿ ಲಭಿಸುತ್ತೆ. ಸಾಮಾಜಿಕ ವ್ಯವಸ್ಥೆಯಲ್ಲಿ ಹೆಣ್ಣು ಗಂಡು ಲಿಂಗ ತಾರತಮ್ಯವಿಲ್ಲದೆ ಎಲ್ಲಾ ಕ್ಷೇತ್ರಗಳಲ್ಲೂ ಸಮಾನ ಸಾಧನೆಗಳು ನಡಯುತ್ತಿವೆ. ಗುಣಮಟ್ಟದ ಶಿಕ್ಷಣ ನೀಡಲು ಸರಕಾರಕ್ಕೆ ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿ ಖಾಸಗಿ ಸಂಸ್ಥೆಗಳು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಶ್ಲಾಘನೀಯ ಎಂದರು.

ಸವಾಲುಗಳಿಗೆ ಹೆದರಿ ಪಲಾಯನಗೈಯದೆ ಸವಾಲುಗಳನ್ನು ದಿಟ್ಟವಾಗಿ ಎದುರಿಸಿ ಭ್ರಷ್ಟಾಚಾರ ಮುಕ್ತ ಸಮಾಜವನ್ನು ಕಟ್ಟಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ನಿಟ್ಟೆ ಪರಿಗಣಿಲ್ಪಟ್ಟ ವಿ.ವಿ ಕುಲಾಧಿಪತಿ ಎನ್ ವಿನಯ್ ಹೆಗ್ಡೆ ಮಾತನಾಡಿ ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಪೈಪೋಟಿಗಳಿದ್ದು, ಗರಿಷ್ಟ ಅಂಕಗಳಿಸಿ ಉತ್ತಮ ವಿದ್ಯಾರ್ಥಿಗಳಾಗುವುದು ಮುಖ್ಯವಲ್ಲ.ಸಮಾಜದಲ್ಲಿ ಅತ್ಯುತ್ತಮ ಪ್ರಜೆಗಳಾಗಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ನಿಟ್ಟೆ ಪರಿಗಣಿಸಲ್ಪಟ್ಟ ವಿ.ವಿ ಕುಲಪತಿ  ಡಾ.ಸತೀಶ್ ಕುಮಾರ್ ಭಂಡಾರಿ,  ಕಾಲೇಜು ಉಪಪ್ರಾಂಶುಪಾಲೆ ಅನ್ನಪೂರ್ಣ ನಾಯ್ಕ್ ,ಉಪನ್ಯಾಸಕಿ ನಳಿನಿ ಶೆಟ್ಟಿ ,ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಜೇಶ್ ಶೆಟ್ಟಿ ,ಕಾರ್ಯದರ್ಶಿ ಚೈತ್ರ ಪ್ರಭು ಉಪಸ್ಥಿತರಿದ್ದರು.

ಉಪನ್ಯಾಸಕಿಯರಾದ ಮೀರಾ ಸ್ವಾಗತಿಸಿದರು. ವೀಣಾ ಉಳ್ಳಾಲ್ ವಂದಿಸಿದರು. ಸುಮನ್ ಮತ್ತು ಶಕುಂತಳ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಕಾಲೇಜು ಪ್ರಾಂಶುಪಾಲರಾದ ಡಾ. ನವೀನ್ ಶೆಟ್ಟಿ ಕೆ ವಾರ್ಷಿಕ ವರದಿ ವಾಚಿಸಿದರು. ದಿವ್ಯಾ ಶೆಟ್ಟಿ ಪ್ರತಿಭಾನ್ವಿತ ವಿದ್ಯಾರ್ಥಿಗಳ ಹೆಸರುಗಳನ್ನು ವಾಚಿಸಿದರು. ಸಂಗೀತ ಶೆಟ್ಟಿ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News