×
Ad

ಮಂಗಳೂರು: ಹೈಲ್ಯಾಂಡ್ ಇಸ್ಲಾಮಿಕ್ ಫೋರಂ ವತಿಯಿಂದ 16ನೇ ಮನೆ ಹಸ್ತಾಂತರ

Update: 2019-11-23 23:57 IST

ಮಂಗಳೂರು : ಹೈಲ್ಯಾಂಡ್ ಇಸ್ಲಾಮಿಕ್ ಫೋರಂ ಪ್ರಾಜೆಕ್ಟ್ ಆಶಿಯಾನ ವತಿಯಿಂದ ವರ್ಷಕ್ಕೆ 10 ಮನೆ ನಿರ್ಮಿಸಿಕೊಡುವ ಯೋಜನೆಯಡಿ ಯಲ್ಲಿ ಇಂದು ಕಡಬ ಮೀನಾಡಿತಲ್ಲಿ 16ನೇ ಸುಸಜ್ಜಿತ ಮನೆಯನ್ನು ಫಲಾನುಭವಿಗೆ ಹಸ್ತಾಂತರಿಸಲಾಯಿತು.

ಕಾರ್ಯಕ್ರಮದ ಮುಖ್ಯ  ಅತಿಥಿಯಾಗಿ ಮಸ್ಜಿದುಲ್ ಏಹ್ಸಾನ್ ಇಮಾಮ್ ಮೌಲಾನಾ ಅಲ್ತಾಫ್ ಹುಸೈನ್, ಪೇರಡ್ಕ ಬದ್ರಿಯಾ ಜುಮಾ ಮಸೀದಿ ಖತೀಬ್ ಮೌಲಾನಾ ಹಾಸನ್ ಮದನಿ,  ಹೈಲ್ಯಾಂಡ್ ಇಸ್ಲಾಮಿಕ್ ಫೋರಂ ಅಧ್ಯಕ್ಷ ಸಜಿದ್ ಎಕೆ ಉಪಸ್ಥಿತರಿದ್ದರು.

ಅತಿ ಶೀಘ್ರದಲ್ಲಿ ಕಾಮಗಾರಿ ಪ್ರಗತಿಯಲ್ಲಿರುವ 17 ಹಾಗೂ 18ನೇ ಮನೆಯನ್ನು ಫಲಾನುಭವಿಗೆ ಹಸ್ತಾಂತರಿಸಲಾಗುವುದು ಎಂದು ಪ್ರಜೆಕ್ಟ್ ಆಶಿಯಾನದ ಸಂಚಾಲಕ ನಝೀಮ್ ಎಕೆ ತಿಳಿಸಿದರು.

ರಿಝ್ವಾನ್ ಪಾಂಡೇಶ್ವರ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News