ಭಾರತ ವಿರುದ್ಧದ ಪಂದ್ಯ ಆಡಲು ವಾಯುಪಡೆಯಲ್ಲಿ ರಜೆ ಕೇಳಿ ಬಂದಿದ್ದಾರೆ ಈ ಬೌಲರ್!

Update: 2019-11-24 10:04 GMT

ಹೊಸದಿಲ್ಲಿ: ಭಾರತ-ಬಾಂಗ್ಲಾ ನಡುವಿನ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ವಿಕೆಟ್ ಕಿತ್ತು ಸೆಲ್ಯೂಟ್ ಗೌರವ ಸಲ್ಲಿಸಿದ್ದ ಬಾಂಗ್ಲಾದ ಬೌಲರ್ ಇಬಾದತ್ ಹುಸೈನ್ ವಾಯುಪಡೆಯ ಉದ್ಯೋಗಿ ಎನ್ನುವುದು ಬಹುತೇಕರಿಗೆ ತಿಳಿದಿಲ್ಲ.

ಈಡನ್ ಗಾರ್ಡನ್ ಲ್ಲಿ ನಡೆಯುತ್ತಿರುವ ಮೊದಲ ಹಗಲು- ರಾತ್ರಿ ಟೆಸ್ಟ್ ಪಂದ್ಯದ ಮೊದಲ ದಿನವೇ ರೊಹಿತ್ ಶರ್ಮಾ ಅವರನ್ನು ಇನ್‍ ಸ್ವಿಂಗರ್ ಮೂಲಕ ಔಟ್ ಮಾಡಿದ್ದರು ಇಬಾದತ್. ವಿಕೆಟ್ ಪಡೆದ ವೇಳೆ ಸೆಲ್ಯೂಟ್ ಸಂಭ್ರಮಾಚರಣೆ ನಡೆಸುತ್ತಿರುವವರಲ್ಲಿ ಇಬಾದತ್ ಮೊದಲನೆಯವರಲ್ಲ. ವೆಸ್ಟ್‍ಇಂಡೀಸ್‍ನ ಎಡಗೈ ವೇಗಿ ಶೆಲ್ಡೋನ್ ಕೆಲ ವರ್ಷಗಳ ಹಿಂದೆ ಇಂತಹ ವಿಶಿಷ್ಟ ಸೆಲ್ಯೂಟ್ ಗೌರವ ಸಲ್ಲಿಸಿದ್ದರು. ತಾನು ವಾಯುಪಡೆಯ ಯೋಧನಾಗಿರುವ ಕಾರಣ ಪ್ರತಿ ವಿಕೆಟ್ ಪಡೆದಾಗಲೂ ಸಶಸ್ತ್ರ ಪಡೆಗಳಿಗೆ ಸಂದ ಗೌರವ ಎನ್ನುವುದು ತನ್ನ ಭಾವನೆ ಎಂದು ಇಬಾದತ್ ಹೇಳುತ್ತಾರೆ.

25 ವರ್ಷದ ಬಾಂಗ್ಲಾ ಬೌಲರ್ 2014ರಿಂದ ಬಾಂಗ್ಲಾದೇಶದ ವಾಯುಪಡೆಯ ಯೋಧನಾಗಿದ್ದು, ಕ್ರಿಕೆಟ್ ಆಡುವ ಸಲುವಾಗಿ ಅನುಮತಿ ಪಡೆದಿದ್ದಾರೆ.

"ನಾನು ಬಾಂಗ್ಲಾ ವಾಯುಪಡೆ ಉದ್ಯೋಗಿ. ನನ್ನ ಸೆಲ್ಯೂಟ್ ಯೋಧರಿಗೆ ಸಲ್ಲುವ ಗೌರವ" ಎಂದು ಅವರು ಬಣ್ಣಿಸಿದರು. ವಿಕೆಟ್ ಪಡೆದಾಗ ಸೆಲ್ಯೂಟ್ ನೀಡುವ ಪಾಠವನ್ನು ಇವರಿಗೆ ಕಲಿಸಿದ್ದು ಬಾಂಗ್ಲಾದೇಶದ ಪ್ರಥಮದರ್ಜೆ ಪಂದ್ಯದಲ್ಲಿ ಆಲ್‍ ರೌಂಡರ್ ಮೊಹ್ಮದುಲ್ಲಾ ರಿಯಾದ್.

ಇಬಾದತ್ ಕ್ರೀಡಾ ಕೋಟದ ಜೊತೆ ವಾಯುಪಡೆಗೆ ಪ್ರವೇಶ ಪಡೆದವರು. ಆದರೆ ಕ್ರಿಕೆಟ್ ಆಟಕ್ಕಾಗಿ ಅಲ್ಲ, ವಾಲಿಬಾಲ್ ನಲ್ಲಿ ತೋರಿದ ಸಾಧನೆಗಾಗಿ. ಇಂದಿಗೂ ಅವರು ವಾಯುಪಡೆ ತಂಡಕ್ಕಾಗಿ ವಾಲಿಬಾಲ್ ಆಡುತ್ತಾರೆ. ಪ್ರತಿ ಬಾರಿ ಬಾಂಗ್ಲಾ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದಾಗಲೂ ಅವರು ವಾಯುಪಡೆಯಿಂದ ಅನುಮತಿ ಪಡೆಯಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News