ಹಳೆಯಂಗಡಿ: ಎಸ್.ಡಿ.ಪಿ.ಐ ವತಿಯಿಂದ ಆರೋಗ್ಯ ತಪಾಸಣಾ ಶಿಬಿರ
ಹಳೆಯಂಗಡಿ, ನ. 24: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಹಳೆಯಂಗಡಿ ವಲಯದ ವತಿಯಿಂದ ಮಂಗಳೂರಿನ ಕೆಎಂಸಿ ಮತ್ತು ಎಜೆ ಆಸ್ಪತ್ರೆಗಳ ಸಹಯೋಗದೊಂದಿಗೆ ಉಚಿತ ಸಾರ್ವಜನಿಕ ಆರೋಗ್ಯ ತಪಾಸಣಾ ಶಿಬಿರವನ್ನು ಇಂದಿರಾನಗರದ ರಿಲಾಯನ್ಸ್ ಭವನದಲ್ಲಿ ಇಂದು ಆಯೋಜಿಸಲಾಗಿತ್ತು.
ಈ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಪ್ರಖ್ಯಾತ ಹೃದ್ರೋಗ ತಜ್ಞ ಡಾ.ನರಸಿಂಹ ಪೈ, ಖ್ಯಾತ ಸ್ತ್ರೀ ರೋಗ ತಜ್ಞೆ ಡಾ. ಕವಿತಾ ಡಿಸೋಜಾ ಭಾಗವಹಿಸಿದ್ದರು.
ಅತಿಥಿಗಳಾಗಿ ಎಸ್.ಡಿ.ಪಿ.ಐ ದ.ಕ.ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ, ಪೂಜಾ ಎರೇಂಜರ್ಸ್ ಆ್ಯಂಡ್ ಕೇಟರರ್ಸ್ ಮಾಲಕ ಜಯಕೃಷ್ಣ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ವೈದ್ಯಕೀಯ ವಿಭಾಗದ ಸಂಯೋಜಕ ಇಲ್ಯಾಸ್ ಬಜ್ಪೆ, ರಿಲಾಯನ್ಸ್ ಅಸೋಸಿಯೇಷನ್ ಅಧ್ಯಕ್ಷ ಮುಬಾರಕ್, ಎಸ್.ಡಿ.ಪಿ.ಐ ಮುಲ್ಕಿ-ಮೂಡಬಿದ್ರೆ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಆಸಿಫ್ ಕೋಟೆಬಾಗಿಲು, ಕಾರ್ಯದರ್ಶಿ ನಿಸಾರ್ ಮರವೂರು, ಸಮಿತಿ ಸದಸ್ಯ ಹಾರಿಸ್ ಹಳೆಯಂಗಡಿ, ಹಳೆಯಂಗಡಿ ವಲಯಾಧ್ಯಕ್ಷ ರಿಯಾಝ್ ಹಳೆಯಂಗಡಿ, ಪಾಪ್ಯುಲರ್ ಫ್ರಂಟ್ ಹಳೆಯಂಗಡಿ ವಲಯಾಧ್ಯಕ್ಷ ಇಫ್ತಿಕಾರ್, ಸಾಮಾಜಿಕ ಕಾರ್ಯಕರ್ತ ಅದ್ದಿ ಬೊಳ್ಳೂರು ಭಾಗವಹಿಸಿದ್ದರು.
ಎಸ್.ಡಿ.ಪಿ.ಐ ಮುಲ್ಕಿ-ಮೂಡಬಿದ್ರೆ ವಿಧಾನ ಸಭಾ ಕ್ಷೇತ್ರ ಸಮಿತಿ ಸದಸ್ಯ ಇಕ್ಬಾಲ್ ಹಳೆಯಂಗಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.