ನಾವು ಸ್ಥಿರ ಸರಕಾರ ನೀಡುತ್ತೇವೆ: ಅಜಿತ್ ಪವಾರ್
Update: 2019-11-24 19:03 IST
ಮುಂಬೈ, ನ.24: ಎನ್‌ಸಿಪಿ ನಾಯಕ ಹಾಗೂ ಮಹಾರಾಷ್ಟ್ರದ ನೂತನ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ರವಿವಾರ ಆರು ನಿಮಿಷಗಳ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇತರ 17 ಬಿಜೆಪಿ ನಾಯಕರಿಗೆ ಕೃತಜ್ಞತೆಗಳನ್ನು ಸೂಚಿಸಿ ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ. ‘ಮಹಾರಾಷ್ಟ್ರದ ಜನರ ಕಲ್ಯಾಣಕ್ಕಾಗಿ ಶ್ರಮಿಸುವ ಸ್ಥಿರ ಸರಕಾರವನ್ನು ನಾವು ಖಚಿತಪಡಿಸುತ್ತೇವೆ ’ಎಂದೂ ಅವರು ಈ ಟ್ವೀಟ್‌ಗಳಲ್ಲಿ ಹೇಳಿದ್ದಾರೆ.
ಟ್ವಿಟರ್‌ನಲ್ಲಿ ತನ್ನ ಸ್ವಪರಿಚಯದಲ್ಲಿಯೂ ಬದಲಾವಣೆ ಮಾಡಿರುವ ಪವಾರ್,ತನ್ನ ಹೆಸರಿನ ಮುಂದೆ ‘ ಉಪ ಮುಖ್ಯಮಂತ್ರಿ,ಮಹಾರಾಷ್ಟ್ರ,ಎನ್‌ಸಿಪಿ ನಾಯಕ ’ಎಂದು ಸೇರಿಸಿಕೊಂಡಿದ್ದಾರೆ.
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೂ ಟ್ವೀಟಿಸಿರುವ ಪವಾರ್, ಅವರ ಶುಭಹಾರೈಕೆಗಳಿಗಾಗಿ ವಂದನೆಗಳನ್ನು ಸೂಚಿಸಿದ್ದಾರೆ.