×
Ad

ವ್ಯಂಗ್ಯಚಿತ್ರಕಾರರು ವಿಪಕ್ಷ ನಾಯಕರಿದ್ದಂತೆ: ಬಾದಲ್ ನಂಜುಂಡಸ್ವಾಮಿ

Update: 2019-11-24 19:52 IST

ಕುಂದಾಪುರ, ನ.24: ಪ್ರಸ್ತುತ ವಿದ್ಯಮಾನಗಳ ಬಗ್ಗೆ ಸದಾ ಎಚ್ಚರಕೆ ಯಿಂದ ಇರುವ ಮತ್ತು ಆಡಳಿತ ವರ್ಗ ಎಡವಿದಾಗ ಬಡಿದೆಬ್ಬಿಸುವ ವ್ಯಂಗ್ಯ ಚಿತ್ರ ಕಾರರು ಒಂದು ರೀತಿಯಲ್ಲಿ ವಿಪಕ್ಷ ನಾಯಕರು ಇದ್ದಂತೆ ಎಂದು ಬೆಂಗಳೂರಿನ ಸ್ಟ್ರೀಟ್ ಆರ್ಟ್ ಕಲಾವಿದ ಬಾದಲ್ ನಂಜುಂಡಸ್ವಾಮಿ ಹೇಳಿದ್ದಾರೆ.

ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ರೋಟರಿ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿರುವ ನಾಲ್ಕು ದಿನಗಳ ನಗುವಿನ ಹಾದಿಯಲ್ಲಿ ಕಾರ್ಟೂನ್ ಯಾತ್ರೆ- ಕಾರ್ಟೂನ್ ಹಬ್ಬದ ಎರಡನೆ ದಿನವಾದ ರವಿವಾರ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತಕರ್ತರ ಸಂಘದ ಸಹಯೋಗದಲ್ಲಿ ನಡೆದ ಖ್ಯಾತ ವ್ಯಂಗ್ಯಚಿತ್ರಕಾರರೊಂದಿಗೆ ಮಾಸ್ಟ್ರರ್ ಸ್ಟ್ರೋಕ್ಸ್ ಕಾರ್ಯಕ್ರಮದಲ್ಲಿ ಸಮ್ಮಾನ ಸ್ವಿೀಕರಿಸಿ ಅವರು ಮಾತನಾಡುತಿದ್ದರು.

ವ್ಯಂಗ್ಯಚಿತ್ರಕಾರರು ಆಗುವುದು ಅಷ್ಟು ಸುಲಭದ ಕೆಲಸ ಅಲ್ಲ. ಅವರಿಗೆ ಅತ್ಯಂತ ಮುಖ್ಯವಾಗಿ ವಿದ್ಯಾಮಾನಗಳ ಬಗ್ಗೆ ಅಪಾರ ಜ್ಞಾನ ಇರಬೇಕು. ಅದೇ ರೀತಿ ಪ್ರತಿದಿನದ ಬೆಳವಣಿಗೆಗಳ ಬಗ್ಗೆ ಅವರು ಅರಿತುಕೊಂಡಿರಬೇಕು. ಆಗ ಮಾತ್ರ ಉತ್ತಮ ವ್ಯಂಗ್ಯ ಚಿತ್ರಕಾರರಾಗಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.

ಕಾರ್ಟೂನ್ ಬಿಡಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ದಿ ಹಿಂದೂ ಪತ್ರಿಕೆಯ ಹಿರಿಯ ವ್ಯಂಗ್ಯ ಚಿತ್ರಕಾರರಾದ ಸುರೇಂದ್ರ ಮಾತನಾಡಿ, ಪತ್ರಿಕೆಗಳಲ್ಲಿ ವ್ಯಂಗ್ಯಚಿತ್ರವು ಸಾಕಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡು ತ್ತದೆ. ಆದುದರಿಂದ ಇಂದು ವ್ಯಂಗ್ಯಚಿತ್ರಗಳು ಬಹಳ ಮಹತ್ವವನ್ನು ಡೆದು ಕೊಂಡಿದೆ ಎಂದು ಹೇಳಿದರು.

ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ ಮಾತನಾಡಿ, ಇಂದಿನ ಯುವ ಜನಾಂಗ ಗಾಂಧೀಜಿಯನ್ನು ಮರೆಯುತ್ತಿದೆ. ಇಂತಹ ಕಾಲಘಟ್ಟದಲ್ಲಿ ಗಾಂಧೀಜಿಯ ಸಂದೇಶ ಸಾರುವ ಕಾರ್ಟೂನ್ ಹಬ್ಬದ ಮೂಲಕ ಅವರನ್ನು ಉಳಿಸಿಕೊಳ್ಳುವ ಕೆಲಸ ಆಗಬೇಕು ಎಂದು ಅಭಿಪ್ರಾಯ ಪಟ್ಟರು.

ಸುಧಾ ಪತ್ರಿಕೆಯ ಹಿರಿಯ ಕಲಾವಿದ ಚಂದ್ರನಾಥ ಆಚಾರ್ಯ, ಕನ್ನಡ ಪ್ರಭದ ಹಿರಿಯ ವ್ಯಂಗ್ಯಚಿತ್ರಕಾರ ವಿ.ಜಿ.ನರೇಂದ್ರ ಮಾತನಾಡಿದರು. ಈ ಸಂದರ್ಭದಲ್ಲಿ ವ್ಯಂಗ್ಯಚಿತ್ರಕಾರರಾದ ದತ್ತಾತ್ರಿ ಎಂ.ಎನ್. ಅವರನ್ನು ಸಮ್ಮಾನಿಸ ಲಾಯಿತು. ಕಾರ್ಯಕ್ರಮ ಸಂಘಟಕ, ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಉಪಸ್ಥಿತರಿದ್ದರು. ಸಮುದಾಯ ಕುಂದಾಪುರದ ಉದಯ ಗಾಂವ್ಕರ್ ಕಾರ್ಯ ಕ್ರಮ ನಿರೂಪಿಸಿಪಿದರು

ಕಾರ್ಟೂನು ಹಬ್ಬ ಜನಾಕರ್ಷಣೆ

ಹಲವು ಪ್ರಸಿದ್ಧ ವ್ಯಂಗ್ಯಚಿತ್ರಕಾರರು ಬಿಡಿಸಿರುವ ನೂರಾರು ಕಾರ್ಟೂನ್ ಗಳನ್ನು ಪ್ರದರ್ಶಿಸಿರುವ ಕಾರ್ಟೂನು ಹಬ್ಬವು ಜನಾಕರ್ಷಣೆಯ ಕೇಂದ್ರ ವಾಗಿದ್ದು, ರವಿವಾರವೂ ನೂರಾರು ಮಂದಿ ಆಗಮಿಸಿ ಕಾರ್ಟೂನ್‌ಗಳನ್ನು ವೀಕ್ಷಿಸಿ ಸಂಭ್ರಮ ಪಟ್ಟರು.
ಕುಂದಾಪುರದ ಪರಿಸರದ ವ್ಯಂಗ್ಯಚಿತ್ರ ಆಸಕ್ತರು, ವಿವಿಧ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು ಕಾರ್ಟೂನ್ ಹಬ್ಬಕ್ಕೆ ಆಗಮಿಸಿ, ಕಾರ್ಟೂನ್ ಗಳನ್ನು ವೀಕ್ಷಿಸಿದರು. ಮನರಂಜನೆಯ ದೃಷ್ಟಿಯಿಂದ ಈ ಕಾರ್ಟೂನ್ ಹಬ್ಬಕೆ್ಕ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News