ನಗರಗಳಲ್ಲಿ ನಿರುದ್ಯೋಗ ಪ್ರಮಾಣ ಇಳಿಕ: ಸರಕಾರದ ಮಾಹಿತಿ

Update: 2019-11-24 14:51 GMT

 ಹೊಸದಿಲ್ಲಿ, ನ.24: ದೇಶದ ನಗರಪ್ರದೇಶದಲ್ಲಿ ನಿರುದ್ಯೋಗ ಪ್ರಮಾಣ 2019ರ ಜನವರಿಯಿಂದ ಮಾರ್ಚ್‌ವರೆಗಿನ ಅವಧಿಯಲ್ಲಿ 9.3%ಕ್ಕೆ ಇಳಿಕೆಯಾಗಿದ್ದು ಕಳೆದ ನಾಲ್ಕು ತ್ರೈಮಾಸಿಕ ಅವಧಿಯಲ್ಲೇ ಇದು ಕನಿಷ್ಟ ದರವಾಗಿದೆ ಎಂದು ಸರಕಾರ ಬಿಡುಗಡೆ ಮಾಡಿರುವ ಅಂಕಿಅಂಶ ತಿಳಿಸಿದೆ.

   

ರಾಷ್ಟ್ರೀಯ ಸಂಖ್ಯಾಶಾಸ್ತ್ರ ಕಚೇರಿ( ಎನ್‌ಎಸ್‌ಒ) ಬಿಡುಗಡೆ ಮಾಡಿರುವ ವರದಿಯಲ್ಲಿ 2018ರ ಜನವರಿಯಿಂದ ಮಾರ್ಚ್‌ವರೆಗಿನ ಅಂಕಿ ಅಂಶ ನೀಡಲಾಗಿಲ್ಲ. ನಗರಗಳ ನಿರುದ್ಯೋಗ ಪ್ರಮಾಣ 2018ರ ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ 9.9%, 2018ರ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ 9.7%, 2018ರ ಎಪ್ರಿಲ್ -ಜೂನ್ ಅವಧಿಯಲ್ಲಿ 9.9% ಇದ್ದರೆ, 2018ರ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ 9.3%ಕ್ಕೆ ಇಳಿದಿದೆ ಎಂದು ಎನ್‌ಎಸ್‌ಒ ತಿಳಿಸಿದೆ.

2019ರ ಜನವರಿ-ಮಾರ್ಚ್ ಅವಧಿಯಲ್ಲಿ ನಗರ ಪ್ರದೇಶದ ಪುರುಷರಲ್ಲಿ ನಿರುದ್ಯೋಗದ ಪ್ರಮಾಣ 8.7% ಇದ್ದರೆ, 2018ರ ಎಪ್ರಿಲ್-ಜೂನ್ ಅವಧಿಯಲ್ಲಿ 9% , ಜುಲೈ-ಸೆಪ್ಟೆಂಬರ್‌ನಲ್ಲಿ 8.9%, ಅಕ್ಟೋಬರ್-ಡಿಸೆಂಬರ್‌ನಲ್ಲಿ 9.2% ಆಗಿತ್ತು. 2019ರ ಜನವರಿ-ಮಾರ್ಚ್‌ನಲ್ಲಿ ನಗರ ಪ್ರದೇಶದ ಮಹಿಳೆಯರಲ್ಲಿ ನಿರುದ್ಯೋಗದ ಪ್ರಮಾಣ 11.6% ಆಗಿದ್ದರೆ , 2018ರ ಎಪ್ರಿಲ್-ಜೂನ್ ಅವಧಿಯಲ್ಲಿ 12.8%, ಜುಲೈ-ಸೆಪ್ಟೆಂಬರ್‌ನಲ್ಲಿ 12.7%, ಅಕ್ಟೋಬರ್-ಡಿಸೆಂಬರ್‌ನಲ್ಲಿ 12.3% ಆಗಿತ್ತು. 2019ರ ಜನವರಿ-ಮಾರ್ಚ್ ಅವಧಿಯಲ್ಲಿ ನಗರ ಪ್ರದೇಶಗಳಲ್ಲಿ ಒಟ್ಟು ಕಾರ್ಮಿಕ ಬಲದ ಭಾಗವಹಿಸುವಿಕೆಯ ಪ್ರಮಾಣ(ಎಲ್‌ಎಫ್‌ಪಿಆರ್) 36% ಆಗಿದ್ದರೆ , 2018ರ ಎಪ್ರಿಲ್-ಜೂನ್ ಅವಧಿಯಲ್ಲಿ ಈ ಪ್ರಮಾಣ 35.6%, ಜುಲೈ-ಸೆಪ್ಟೆಂಬರ್‌ನಲ್ಲಿ 36.1%, ಅಕ್ಟೋಬರ್-ಡಿಸೆಂಬರ್‌ನಲ್ಲಿ 36.3% ಆಗಿತ್ತು. 2019ರ ಜನವರಿ-ಮಾರ್ಚ್ ಅವಧಿಯಲ್ಲಿ ಎಲ್‌ಎಫ್‌ಪಿಆರ್‌ನಲ್ಲಿ ಪುರುಷರ ಪ್ರಮಾಣ 56.2%, ಆಗಿದ್ದರೆ ಮಹಿಳೆಯರ ಪ್ರಮಾಣ 15% ಆಗಿತ್ತು ಎಂದು ಅಂಕಿ ಅಂಶ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News