×
Ad

ಜನವಸತಿ ಪ್ರದೇಶಕ್ಕೆ ಅಪ್ಪಳಿಸಿದ ವಿಮಾನ: 23 ಮಂದಿ ಮೃತ್ಯು

Update: 2019-11-24 20:40 IST

ಗೊಮಾ (ಕಾಂಗೊ ಗಣರಾಜ್ಯ), ನ.24: ಡೆಮಾಕ್ರಾಟಿಕ್ ಗಣರಾಜ್ಯದ ನಗರವಾದ ಗೋಮಾದಲ್ಲಿರುವ ಜನದಟ್ಟಣೆಯ ಪ್ರದೇಶವೊಂದರ ಮೇಲೆ ಕಿರುವಿಮಾನವೊಂದು ರವಿವಾರ ಪತನಗೊಂಡಿದ್ದು, ಕನಿಷ್ಠ 23 ಮಂದಿ ಸಾವನ್ನಪ್ಪಿದ್ದಾರೆ.

ವಿಮಾನದಲ್ಲಿದ್ದವರು ಹಾಗೂ ದುರಂತ ನಡೆದ ಸ್ಥಳದಲ್ಲಿದ್ದವರು ಮೃತಪಟ್ಟವರಲ್ಲಿ ಒಳಗೊಂಡಿದ್ದಾರೆಂದು ಗೋಮಾ ರಕ್ಷಣಾ ಸೇವೆಯ ಸಮನ್ವಯಕಾರ ಜೋಸೆಫ್ ಮಾಕುಂಡಿ ತಿಳಿಸಿದ್ದಾರೆ. ವಿಮಾನ ಪತನಗೊಂಡ ಸ್ಥಳದಲ್ಲಿ ದಟ್ಟವಾದ ಕಪ್ಪುಹೊಗೆ ಹಾಗೂ ಬೆಂಕಿಯ ಜ್ವಾಲೆಗಳು ಏಳುತ್ತಿರುವುದನ್ನು ಸುದ್ದಿವಾಹಿನಿಗಳು ಪ್ರದರ್ಶಿಸಿವೆ.

ಪತನಗೊಂಡ ವಿಮಾನದಲ್ಲಿ 17 ಪ್ರಯಾಣಿಕರು ಹಾಗೂ ಇಬ್ಬರು ಸಿಬ್ಬಂದಿಯಿದ್ದರೆಂದು, ಬ್ಯುಸಿಬಿ ಏರ್‌ಲೈನ್‌ನ ಅಧಿಕಾರಿ ಹೆರಿಟಿಯರ್ ಸಯೀದ್ ಮುಮ್ಮದೌ ತಿಳಿಸಿದ್ದಾರೆ.  ಡೋರ್ನಿಯರ್-228 ಮಾದರಿಯ ಈ ಕಿರುವಿಮಾನವು ಗೋಮಾದಿಂದ 350 ಕಿ.ಮೀ. ದೂರದ ಉತ್ತರಕ್ಕಿರುವ ಬೆನಿ ನಗರಕ್ಕೆ ಪ್ರಯಾಣಿಸುತ್ತಿತ್ತು.

 ಹಾರಾಟ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಅದು ವಿಮಾನ ನಿಲ್ದಾಣ ಸಮೀಪದ ವಸತಿ ಪ್ರದೇಶವೊಂದರ ಮೇಲೆ ಪತನಗೊಂಡಿತೆಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News