ಆತ್ರಾಡಿ ಪರೀಕದಲ್ಲಿ ಚಿರತೆ ದಾಳಿ: ನಾಯಿಗೆ ಗಾಯ

Update: 2019-11-24 16:19 GMT

ಹಿರಿಯಡ್ಕ, ನ.24: ಆತ್ರಾಡಿ ಸಮೀಪದ ಪರೀಕ ಪರಿಸರದಲ್ಲಿ ಕಳೆದ ನಾಲ್ಕು ದಿನಗಳಿಂದ ಚಿರತೆಯೊಂದು ತಿರುಗಾಡುತ್ತಿದ್ದು, ನ.23ರಂದು ರಾತ್ರಿ ಸ್ಥಳೀಯ ಮನೆಯೊಂದರ ಸಾಕು ನಾಯಿ ಮೇಲೆ ದಾಳಿ ನಡೆಸಿ ಗಾಯಗೊಳಿಸಿರುವ ಬಗ್ಗೆ ವರದಿಯಾಗಿದೆ.

ಮೂರು ನಾಲ್ಕು ದಿನಗಳ ಹಿಂದೆ ಈ ಪರಿಸರದಲ್ಲಿ ಚಿರತೆ ಓಡಾಟ ನಡೆಸು ತ್ತಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯಾಧಿಕಾರಿಗಳು ಈ ಕುರಿತು ಪರಿಶೀಲನೆ ನಡೆಸಿದ್ದರು. ಇದೀಗ ಮತ್ತೆ ನಿನ್ನೆ ರಾತ್ರಿ ವೇಳೆ ಪರೀಕದ ದಿನೇಶ್ ಪೂಜಾರಿ ಎಂಬವರ ಮನೆಯ ಜಗುಲಿ ಯಲ್ಲಿ ಮಲಗಿದ ನಾಯಿಯ ಮೇಲೆ ಚಿರತೆ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ.

ಇದರಿಂದ ನಾಯಿಯ ಮುಖಕ್ಕೆ ಗಾಯವಾಗಿದೆ. ಅಲ್ಲದೆ ಅಲ್ಲೇ ಸಮೀಪದ ಹರೀಶ್ ಪೂಜಾರಿ ಎಂಬವರ ಮನೆಯ ಎರಡು ಕೋಳಿಯನ್ನು ಚಿರತೆ ತೆಗೆದುಕೊಂಡು ಹೋಗಿದೆ ಎನ್ನಲಾಗಿದೆ. ಇದರಿಂದ ಸ್ಥಳೀಯ ಜನತೆ ಈ ಪರಿಸರದಲ್ಲಿ ರಾತ್ರಿ ತಿರುಗಾಡಲು ಭೀತಿ ಪಡುವಂತಾಗಿದೆ.

‘ಪರೀಕ ಪರಿಸರದಲ್ಲಿ ಮೂರು ನಾಲ್ಕು ದಿನಗಳಿಂದ ಚಿರತೆ ಓಡಾಟ ನಡೆಸು ತ್ತಿವೆ ಎಂದು ಸ್ಥಳೀಯರು ದೂರು ನೀಡಿದ್ದರು. ಅಲ್ಲದೆ ನಿನ್ನೆ ರಾತ್ರಿ ಪ್ರತ್ಯಕ್ಷ ವಾಗಿರುವ ಬಗ್ಗೆಯೂ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆ ಸ್ಥಳಕ್ಕೆ ತೆರಳಿ ಬೋನು ಇಟ್ಟು ಚಿರತೆಯನ್ನು ಸೆರೆ ಹಿಡಿಯಲು ಪ್ರಯತ್ನಿಸ ಲಾಗುವುದು’ ಎಂದು ಹಿರಿಯಡ್ಕ ಉಪ ವಲಯ ಅರಣ್ಯಾಧಿಕಾರಿ ಜಯ ರಾಮ್ ಪತ್ರಿಕೆಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News