×
Ad

ಕೆಸಿಎಫ್ ಒಮಾನ್‌ನಿಂದ ಮೀಲಾದ್ ಸಮಾವೇಶ

Update: 2019-11-24 21:50 IST

ಉಡುಪಿ, ನ. 24: ಕರ್ನಾಟಕ ಕಲ್ಚರಲ್ ಫೌಂಡೇಶನ್ ಒಮಾನ್ ಇದರ ರಾಷ್ಟ್ರೀಯ ಸಮಿತಿಯ ವತಿಯಿಂದ ಪ್ರವಾದಿ ಮುಹಮ್ಮದ್(ಸ.ಅ.) ಅವರ  ಜನ್ಮ ದಿನಾಚರಣೆಯ ಪ್ರಯುಕ್ತ ಮೀಲಾದ್ ಸಮಾವೇಶವನ್ನು ಶುಕ್ರವಾರ ಮಸ್ಕತ್‌ನ ರುವಿಯ ಅಲ್ ಮಾಸಾ ಹಾಲ್ನಲ್ಲಿ ಆಯೋಜಿಸಲಾಗಿತ್ತು.

ಅಧ್ಯಕ್ಷತೆಯನ್ನು ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಅಯ್ಯೂಬ್ ಕೋಡಿ ವಹಿಸಿದ್ದರು. ಸಯ್ಯಿದ್ ಮುಹಮ್ಮದ್ ಇಲ್ಯಾಸ್ ಹುಸೈನ್ ಅಹ್ಸನಿ ಜಿಲಾನಿ ಲಕ್ಷ ದ್ವೀಪ ದುವಾ ನೆರವೇರಿಸಿದರು. ದಾವಣಗೆರೆ ಎಸ್‌ವೈಎಸ್ ಅಧ್ಯಕ್ಷ ಮೌಲಾನ ಇಬ್ರಾಹಿಂ ಸಖಾಫಿ ಸಮಾವೇಶವನ್ನು ಉದ್ಘಾಟಿಸಿದರು.

ಮುಖ್ಯ ಪ್ರಭಾಷಣಗಾರರಾಗಿ ಎಸ್‌ಎಸ್‌ಎಫ್ ಕರ್ನಾಟಕ ರಾಜ್ಯ ಉಪಾ ಧ್ಯಕ್ಷ ಹಾಫಿಝ್ ಎಚ್.ಐ.ಸುಫಿಯಾನ್ ಸಖಾಫಿ ಕಾವಲ್ಕಟ್ಟೆ, ಪ್ರವಾದಿ ಈ ಜಗತ್ತಿಗೆ ಕಲಿಸಿಕೊಟ್ಟ ಶಾಂತಿಯುತ ಸಹಬಾಳ್ವೆ, ಸಮಾನತೆ ಹಾಗೂ ಅವರ ಜೀವನದ ಕ್ರಮವನ್ನು ವಿವರಿಸಿದರು.

ನಂತರ ಖಾರಿ ಮುಹಮ್ಮದ್ ರಿಯಾಝುದ್ದೀನ್ ಅಶ್ರಫಿ ಮುಂಬಯಿ ನಅತೇ ಶರೀಫ್ ನಡೆಸಿಕೊಟ್ಟರು. ಅಬ್ದುಲ್ ರಹಮಾನ್ ಮೊಗರ್ಪಣೆ ಸುಳ್ಯ, ಶಾಹಿದ್ ರಝಾ ಮಿಸ್ಬಾಹಿ, ಐಸಿಎಫ್ ಒಮಾನ್ ಅಧ್ಯಕ್ಷ ಶಫೀಕ್ ಬುಖಾರಿ, ಇಬ್ರಾಹಿಂ ಹಾಜಿ ಅತ್ರಾಡಿ, ಆರಿಫ್ ಕೋಡಿ, ಹಂಝ ಹಾಜಿ ಕನ್ನಂಗಾರ್, ಖಾಸಿಂ ಹಾಜಿ ನಿಝ್ವ, ಶಮೀರ್ ಉಸ್ತಾದ್ ಹೂಡೆ, ಹನೀಫ್ ಸಅದಿ, ಝುಬೈರ್ ಸಅದಿ, ನಿಝಾರ್ ಝುಹುರಿ, ಸಲೀಮ್ ಮಿಸ್ಬಾಹಿ ಮೊದಲಾದ ವರು ಉಪಸ್ಥಿತರಿದ್ದರು.

ವಿವಿಧ ವಲಯ ಅಧ್ಯಕ್ಷರುಗಳಾದ ಅಹಮದ್ ಸ್ವಾದಿಕ್ ಕಾಟಿಪಳ್ಳ, ಜಸೀಮ್, ಹನೀಫ್ ಮನ್ನಾಫ್, ಅಬ್ಬಾಸ್ ಮರಕಡ ಸುಳ್ಯ, ಬಾಷ ತೀರ್ಥಹಳ್ಳಿ ವಿವಿಧ ಕಾರ್ಯಕ್ರಮಗಣುಗುಣವಾಗಿ ಪ್ರಶಸಿ್ತ ಪತ್ರವನ್ನು ಪಡೆದುಕೊಂಡರು.

ಕೆಸಿಎಫ್ ಒಮಾನ್ ಹೊರತಂದ ಕ್ಯಾಲೆಂಡರ್ 2020ನ್ನು ಡಿಕೆಎಸ್‌ಸಿ ಅಧ್ಯಕ್ಷ ಮೊನಬ್ಬ ಹಾಜಿ ಅವರಿಗೆ ಪ್ರಥಮ ಪ್ರತಿಯನ್ನು ನೀಡುವುದರ ಮೂಲಕ ಹಾಫಿಝ್ ಸುಫಿಯಾನ್ ಸಖಾಫಿ ಬಿಡುಗಡೆಗೊಳಿಸಿದರು. ಕೆಸಿಎಫ್ ಒಮಾನ್ 2019ರ ಅತ್ಯುತ್ತಮ ರಾಷ್ಟ್ರೀಯ ಸಮಿತಿಯ ಸದಸ್ಯರಾಗಿ ಅಶ್ರಫ್ ಾರತ್ ಸುಳ್ಯ ಪಡೆದುಕೊಂಡರು.

ಕೆಸಿಎಫ್ ಒಮಾನ್ ಪ್ರಧಾನ ಕಾರ್ಯದರ್ಶಿ ಸ್ವಾದಿಕ್ ಹಾಜಿ ಸುಳ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೀಲಾದ್ ಸ್ವಾಗತ ಸಮಿತಿಯ ಸಂಚಾಲಕ ಸಯ್ಯಿದ್ ಆಬಿದ್ ಅಲ್ ಹೈದ್ರೋಸಿ ಸ್ವಾಗತಿಸಿದರು. ಕೆಸಿಎಫ್ ಒಮಾನ್ ಎಜುಕೇಶನ್ ಅಧ್ಯಕ್ಷ ಉಬೈದುಲ್ಲಾ ಸಖಾಫಿ ವಂದಿಸಿದರು. ಕಲಂದರ್ ಬಾವ ಪರಪ್ಪು ಕಾರ್ಯಕ್ರಮ ನಿರೂಪಿಸಿದರು.

ಸಯ್ಯಿದ್ ಸೈಫುದ್ದೀನ್ ಅಲ್ ಹೈದ್ರೋಸಿ ತಂಙಳ್ ಕೊಡಗು, ಇಕ್ಬಾಲ್ ಮದನಿ ಬೆಳ್ಳಾರೆ, ಅಹಮದ್ ಸಾದಿಕ್ ಕಾಟಿಪಳ್ಳ ಮೌಲೂದ್ ಮಜ್ಲಿಸ್ ಹಾಗೂ ಬುರ್ಧಾ ಆಲಾಪನೆ ನಡೆಸಿಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News