ಪೊಲೀಸ್ ವಾಹನ ಢಿಕ್ಕಿ: ಎಎಸ್ಸೈ ಸಹಿತ ಮೂವರಿಗೆ ಗಾಯ
Update: 2019-11-24 21:53 IST
ಹಿರಿಯಡ್ಕ, ನ.24: ಪೊಲೀಸ್ ವಾಹನವೊಂದು ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಮಹಿಳಾ ಎಎಸ್ಸೈ ಸಹಿತ ಮೂವರು ಗಾಯಗೊಂಡ ಘಟನೆ ನ.23ರಂದು ಮಧ್ಯಾಹ್ನ 2.45ರ ಸುಮಾರಿಗೆ ಪೆರ್ಡೂರು ಗ್ರಾಮದ ಕಜಾನೆ ಕ್ರಾಸ್ ಎಂಬಲ್ಲಿ ನಡೆದಿದೆ.
ಶಿವಪುರದಿಂದ ಉಡುಪಿ ಕಡೆಗೆ ಬರುತ್ತಿದ್ದ ಮಾರುತಿ ಕಾರಿಗೆ ಪೆರ್ಡೂರು ಕಡೆಯಿಂದ ಹೆಬ್ರಿ ಕಡೆಗೆ ಹೋಗುತ್ತಿದ್ದ ಪೊಲೀಸ್ ವಾಹನ ಎದುರಿನಲ್ಲಿದ್ದ ಲಾರಿ ಯನ್ನು ಓವರ್‌ಟೇಕ್ ಮಾಡುವ ಭರದಲ್ಲಿ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರ ಪರಿಣಾಮ ಎರಡು ವಾಹನಗಳು ಜಖಂಗೊಂಡಿವೆ.
ಪೊಲೀಸ್ ವಾಹನದಲ್ಲಿದ್ದ ಮಹಿಳಾ ಸಹಾಯಕ ಪೊಲೀಸ್ ಉಪನಿರೀಕ್ಷಕಿ ಪುಷ್ಪಾಎಂಬವರು ಗಾಯಗೊಂಡು ಪ್ರಜ್ಞೆ ತಪ್ಪಿದ್ದು, ಕಾರಿನಲ್ಲಿದ್ದ ಪ್ರಶಾಂತ್ ಹೆಗ್ಡೆ, ಶಿವರಾಮ ಶೆಟ್ಟಿ ಗಾಯಗೊಂಡಿದ್ದಾರೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.