ಪ್ರೊ ಇಂಡಿಯಾ ಮೊಯ್‌ಥಾಯ್ ಸಮಾರೋಪ
ಮಂಗಳೂರು, ನ.24: ನಗರದ ಕರಾವಳಿ ಉತ್ಸವ ಮೈದಾನದಲ್ಲಿ ನ.20ರಂದು ಆರಂಭಗೊಂಡ ಪ್ರೊ ಇಂಡಿಯಾ ಮೊಯ್‌ಥಾಯ್ ಚಾಂಪಿಯನ್‌ಶಿಪ್‌ಗೆ ರವಿವಾರ ಸಂಜೆ ತೆರೆಬಿದ್ದಿತು.
ಸಮಾರೋಪ ಕಾರ್ಯಕ್ರಮದಲ್ಲಿ ಮೊಯ್‌ಥಾಯ್ ಅಸೋಸಿಯೇಶನ್‌ನ ಬ್ರಾಂಡ್ ಅಂಬಾಸಿಡರ್, ನಟ ಅಲಿ ಹಸನ್ ಮಾತನಾಡಿ, ಮೊಯ್‌ಥಾಯ್ ಯುವಕರ ಶಕ್ತಿಯನ್ನು ಪ್ರತಿನಿಧಿಸುವಂತಹ ಕ್ರೀಡೆಯಾಗಿದೆ. ದೇಶದಲ್ಲಿ ಈ ಕ್ರೀಡೆಯು ದಿನದಿಂದ ದಿನಕ್ಕೆ ಭಾರೀ ಜನಪ್ರಿಯತೆ ಪಡೆಯುತ್ತಿದೆ. ಯುವಕರು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ಸಂತಸದ ವಿಷಯವಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಚಾಂಪಿಯನ್‌ಶಿಪ್‌ಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಮೊಯ್‌ಥಾಯ್ ಕ್ರೀಡೆ ಥೈಲ್ಯಾಂಡ್‌ನಲ್ಲಿ ಆರಂಭಗೊಂಡು ಭಾರತದಲ್ಲೂ ತನ್ನ ಹೆಜ್ಜೆಯನ್ನು ಮೂಡಿಸುತ್ತಿದೆ. ಭಾರತೀಯರು ಯುವಕರೂ ಹೆಚ್ಚಿನ ಸಂಖ್ಯೆಯಲ್ಲಿ ಮೊಯ್‌ಥಾಯ್‌ನತ್ತ ಆಸಕ್ತಿ ತೋರಿಸುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ತಿಳಿಸಿದರು.
ಸಮಾರೋಪ ಸಮಾರಂಭದಲ್ಲಿ ಶಾಸಕ ಡಾ.ಭರತ್ ಶೆಟ್ಟಿ ಸ್ವಾಗತಿಸಿದರು. ಮೊಯ್‌ಥಾಯ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ರಾಜ್ ಗೋಪಾಲ್ ರೈ, ಅಸೋಸಿಯೇಶನ್ ಗೌರವಾಧ್ಯಕ್ಷ ಎ.ಸದಾನಂದ ಶೆಟ್ಟಿ, ಎಪಿಎಂಸಿ ಮಾಜಿ ಅಧ್ಯಕ್ಷ ನೇಮರಾಜ ರೈ, ಎಂಆರ್‌ಪಿಎಲ್ ಅಧಿಕಾರಿ ರುಡಾಲ್ಫ್ ನೊರೊನ್ಹಾ, ಒಎನ್‌ಜಿಸಿ ಅಧಿಕಾರಿ ವಿವೇಕ್ ಮಲ್ಯ, ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಡಿಸಿಪಿ ಲಕ್ಷ್ಮೀ ಗಣೇಶ್, ಕಾರ್ಪೊರೇಟರ್ ಶಶಿಧರ ಹೆಗ್ಡೆ, ಬಶೀರ್ ಬೈಕಂಪಾಡಿ, ಬಾಲಕೃಷ್ಣ ಶೆಟ್ಟಿ, ಶರಣ್ ಪಂಪ್‌ವೆಲ್, ಡಿ.ಎಂ.ಅಸ್ಲಾಂ ಮೊದಲಾದವರು ಉಪಸ್ಥಿತರಿದ್ದರು.