ಬಿಐಟಿಯ ಬ್ಯಾರೀಸ್ ಅರೆನಾ ಕ್ರೀಡಾಂಗಣದಲ್ಲಿ ಯಶಸ್ವಿ ಫುಟ್ಬಾಲ್ ಪಂದ್ಯಾವಳಿ

Update: 2019-11-25 05:06 GMT

ಮಂಗಳೂರು, ನ. 24: ಬ್ಯಾರೀಸ್ ಇಸ್ಟಿಟ್ಯೂಟ್ ಆಫ್ ಟೆಕ್ನೋಲಜಿಯ ಇತ್ತೀಚೆಗೆ ಉದ್ಘಾಟನೆಯಾದ ನೂತನ ಸುಸಜ್ಜಿತ ಕ್ರೀಡಾಂಗಣ ಬ್ಯಾರೀಸ್ ಅರೆನಾದಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಪಿಯು ಕಾಲೇಜುಗಳಿಗಾಗಿ ಆಯೋಜಿಸಲಾಗಿದ್ದ ಎರಡು ದಿನಗಳ ಫುಟ್ಬಾಲ್ ಪಂದ್ಯಾವಳಿಯಲ್ಲಿ ಮಂಗಳೂರಿನ ಯೆನೆಪೊಯ ಕಾಲೇಜು ಚಾಂಪಿಯನ್ ಆಗಿದೆ. ಆ ಮೂಲಕ ತಂಡ 25,000 ರೂ. ನಗದು ಬಹುಮಾನ ಮತ್ತು ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.

ರನ್ನರ್ ಅಪ್ ಮಡಿಕೇರಿಯ ಕಾವೇರಿ ಕಾಲೇಜು 15,000 ರೂ. ನಗದು ಬಹುಮಾನ ಮತ್ತು ಟ್ರೋಫಿಯನ್ನು ಗೆದ್ದಿದೆ. ಒಟ್ಟು 23 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.

ಯೆನೆಪೊಯದ ಸುಮನ್ ಅತ್ಯುತ್ತಮ ಆಟಗಾರ, ಮನೋಜ ಗೌಡ ಅತ್ಯುತ್ತಮ ಗೋಲ್‌ಕೀಪರ್ ಮತ್ತು ಅಮಾನ್ ಅತ್ಯುತ್ತಮ ಸ್ಟ್ರೈಕರ್ ಹಾಗೂ ಕಾವೇರಿ ಕಾಲೇಜಿನ ಸೈಫುದ್ದೀನ್ ಎಂ.ಎಚ್. ಅತ್ಯುತ್ತಮ ಡಿಫೆಂಡರ್ ಪ್ರಶಸ್ತಿಗಳಿಗೆ ಪಾತ್ರರಾದರು.

ಬ್ಯಾರೀಸ್ ಗ್ರೂಪ್ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಿ, ಅಭಿನಂದನೆ ಸಲ್ಲಿಸಿದರು. ಬಿಐಟಿಯ ಪ್ರಾಂಶುಪಾಲ ಡಾ. ಎಸ್.ಐ.ಮಂಜೂರ್ ಬಾಷಾ, ಬೀಡ್ಸ್ ಪ್ರಾಂಶುಪಾಲ ಅಶೋಕ ಮೆಂಡೋನ್ಸಾ, ದೈಹಿಕ ಶಿಕ್ಷಣ ನಿರ್ದೇಶಕ ಸಫ್ವಾನ್ ಖಾನ್, ಪಂದ್ಯಾವಳಿಯ ಸಂಘಟಕ ಡಾ. ಮಹೇಂದ್ರ, ಮೀಡಿಯಾ ಇನ್‌ಚಾರ್ಜ್ ಡಾ. ಅಬ್ದುಲ್ಲಾ ಗುಬ್ಬಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News