ಮಂಗಳೂರು : ಗ್ಯಾಸ್ ಸೋರಿಕೆಯಿಂದ ಸ್ಪೋಟ; ಇಬ್ಬರಿಗೆ ಗಾಯ
Update: 2019-11-25 11:48 IST
ಮಂಗಳೂರು: ಅಡುಗೆ ಅನಿಲ ಸೋರಿಕೆಯಿಂದ ಸ್ಪೋಟಗೊಂಡು ಬೆಂಕಿ ಹೊತ್ತಿಕೊಂಡ ಪರಿಣಾಮ ಇಬ್ಬರು ಗಾಯಗೊಂಡ ಘಟನೆ ವಾಸ್ ಲೇನ್ ನಲ್ಲಿರುವ ಮನೆಯೊಂದರಲ್ಲಿ ನಡೆದಿದೆ.
ಗಾಯಾಳುಗಳನ್ನು ಮಂಜುನಾಥ್ (25) ಹಾಗು ರೇಖಾ (20) ಎಂದು ತಿಳಿದುಬಂದಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಘಟನಾ ಸ್ಥಳಕ್ಕೆ ಪಾಂಡೇಶ್ವರ ಅಗ್ನಿಶಾಮಕ ದಳ ತೆರಳಿ ಕಾರ್ಯಚರಣೆ ನಡೆಸಿದೆ.