ದೊಡ್ಡಣಗುಡ್ಡೆ ಪ್ರಕರಣ: ನೈಜ ಆರೋಪಿಗಳ ಬಂಧನಕ್ಕೆ ಆಗ್ರಹ
Update: 2019-11-25 20:29 IST
ಉಡುಪಿ, ನ. 25: ಹತ್ತು ದಿನಗಳ ಹಿಂದೆ ದೊಡ್ಡಣ್ಣಗುಡ್ಡೆಯ ವ್ಯಾಯಾಮ ಶಾಲೆಯಲ್ಲಿರುವ ಆಂಜನೇಯ ಭಾವಚಿತ್ರಕ್ಕೆ ಅವಮಾನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಪೊಲೀಸರು ಬಂಧಿಸಿರುವ ಮೂವರು ನಿರಪರಾಧಿಗಳಾಗಿದ್ದು, ನೈಜ ಆರೋಪಿಗಳನ್ನು ಬಂಧಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಅನ್ಸಾರ್ ಅಹ್ಮದ್ ಒತ್ತಾಯಿಸಿದ್ದಾರೆ.
ಬಂಧಿತ ಮೂವರು ನಾವು ನಿರಪರಾಧಿಗಳೆಂದು ಹೇಳಿದರೂ ಯಾರು ಕೇಳ ದಾಗ ದೊಡ್ಡಣಗುಡ್ಡೆ ದರ್ಗಾ ಹಾಗೂ ಧೂಮಾವತಿ ಜುಮಾದಿಕಟ್ಟೆಗೆ ಭೇಟಿ ಕೊಟ್ಟು ಯಾವುದೇ ತಪ್ಪು ಮಾಡಿಲ್ಲ ಹಾಗೂ ಈ ಪ್ರಕರಣದ ನೈಜ ಆರೋಪಿ ಗಳಿಗೆ ನೀವೇ ಶಿಕ್ಷೆ ನೀಡಬೇಕೆಂದು ದೂರು ನೀಡಿರುತ್ತಾರೆ. ಈ ಪ್ರಕರಣದಲ್ಲಿ ಕಾಣದ ಕೈಯೊಂದು ಕೆಲಸ ಮಾಡುತ್ತಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಆದ್ದರಿಂದ ಪೊಲೀಸ್ ಇಲಾಖೆ ಕೂಡಲೇ ಎಚ್ಚೆತ್ತುಕೊಂಡು ಪ್ರಕರಣದ ನೈಜ್ಯ ಆರೋಪಿಗಳನ್ನು ಪತ್ತೆ ಹಚ್ಚುವಂತೆ ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.