‘ಉಡುಪಿ ಇ ಸ್ಯಾಂಡ್’ ಆನ್‌ಲೈನ್‌ನಲ್ಲಿ ಮರಳು ವಿತರಣೆ ಆರಂಭ

Update: 2019-11-25 15:04 GMT

ಹಿರಿಯಡ್ಕ, ನ. 25: ಯಾವುದೇ ಅಕ್ರಮಗಳಿಗೆ ಅವಕಾಶ ಇಲ್ಲದಂತೆ, ಬಡವ ರಿಗೆ ಕೈಗೆಟುಕುವ ದರದಲ್ಲಿ ಮರಳು ಲಭ್ಯವಾಗುವ ನಿಟ್ಟಿನಲ್ಲಿ ಹಿರಿಯಡ್ಕ ಸಮೀಪದ ಬಜೆ ಡ್ಯಾಂನ ಸ್ವರ್ಣ ನದಿಯಿಂದ ಸಂಗ್ರಹಿಸಲಾದ ಮರಳನ್ನು ಉಡುಪಿ ಜಿಲ್ಲಾ ಮರಳು ಉಸ್ತುವಾರಿ ಸಮಿತಿಯು ಹೊರತಂದಿರುವ ‘ಉಡುಪಿ ಇ ಸ್ಯಾಂಡ್’ ಮೊಬೈಲ್ ಆ್ಯಪ್ ಹಾಗೂ ವೆಬ್‌ಸೈಟ್ ಮೂಲಕ ವಿತರಿಸುವ ಕಾರ್ಯವನ್ನು ಇಂದಿನಿಂದ ಆರಂಭಿಸಲಾಯಿತು.

ಹಿರಿಯಡ್ಕ ಮಿಲಿಟ್ರಿ ಮೈದಾನದಲ್ಲಿ ಸ್ಥಾಪಿಸಲಾಗಿರುವ ಮರಳು ದಾಸ್ತಾನು ಕೇಂದ್ರದಲ್ಲಿ ಇಂದು ಉಡುಪಿ ಜಿಲ್ಲಾಧಿಕಾರಿ ಜಗದೀಶ್, ವಾಹನ ಮಾಲಕರಿಗೆ ಟ್ರಿಪ್‌ಶೀಟ್‌ನ್ನು ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು. ‘ಗ್ರಾಹಕರು ವೆಬ್‌ಸೈಟ್ ಮೂಲಕ ಮುಂಗಡವಾಗಿ ಮರಳನ್ನು ಕಾದಿರಿಸಬಹುದು. ಇದರಲ್ಲಿ ತಮ್ಮ ವಿವರ, ವಿಳಾಸ ಮತ್ತು ಬೇಕಾಗಿರುವ ಮರಳಿನ ವಿವರವನ್ನು ದಾಖಲಿಸಿ, ಅಂದಾಜು ವೆಚ್ಚವನ್ನು ಪರಿಶೀಲಿಸಿ ಹಣ ಪಾವತಿಸಿ ಬುಕಿಂಗ್ ಐಡಿ ಮತ್ತು ಒಟಿಪಿಯನ್ನು ಪಡೆದುಕೊಳ್ಳಬಹುದು. ಲಾರಿ ಮಾಲಕರು ಆಪ್ ಮೂಲಕ ಗ್ರಾಹಕರ ವಿವರ ಮತ್ತು ವಿಳಾಸದ ಮಾಹಿತಿ ಪಡೆದು ಗ್ರಾಹಕರ ಮನೆಗೆ ಮರಳು ತಲುಪಿಸಲಿದ್ದಾರೆ. ಈ ವೇಳೆ ಗ್ರಾಹಕರು ತಮ್ಮ ಒಟಿಪಿಯನ್ನು ಲಾರಿ ಚಾಲಕರಿಗೆ ತೋರಿಸಿ ಮರಳನು್ನ ಪಡೆದುಕೊಳ್ಳಬಹುದು ಎಂದರು.

ಶಾಸಕರಾದ ರಘುಪತಿ ಭಟ್, ಲಾಲಾಜಿ ಆರ್.ಮೆಂಡನ್, ಜಿಲ್ಲಾಧಿಕಾರಿ ಜಗದೀಶ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ರಾಂಜಿ ನಾಯ್ಕ, ಪೌರಾಯಕ್ತ ಆನಂದ ಕಲ್ಲೋಳಿಕರ್, ಬೊಮ್ಮರಬೆಟ್ಟು ಗ್ರಾಪಂ ಅಧ್ಯಕ್ಷೆ ಸವಿತಾ ನಾಯಕ್, ಉಪಾಧ್ಯಕ್ಷ ಹರೀಶ್ ಸಾಲ್ಯಾನ್, ತಾಪಂ ಸದಸ್ಯೆ ಸಂದ್ಯಾ ಕಾಮತ್ ಮೊದಲಾದವರು ಉಪಸ್ಥಿತರಿದ್ದರು.

2250 ಮೆಟ್ರಿಕ್ ಟನ್ ಮರಳು

ಸ್ವರ್ಣ ನದಿಯ ಬಜೆ ಡ್ಯಾಂನಿಂದ ಹೂಳು ತೆಗೆಯಲು ಉಡುಪಿ ನಗರ ಸಭೆಯಿಂದ ಟೆಂಡರ್ ಕರೆಯಲಾಗಿದ್ದು, ಇದನ್ನು ಮಂಗಳೂರು ಯೋಜಕ ಇಂಡಿಯಾ ಪ್ರೈವೆಟ್ ಲಿಮಿಟೆಡ್ ವಹಿಸಿಕೊಂಡಿದೆ. ಎರಡು ಹಂತದಲ್ಲಿ ಹೂಳೆ ತ್ತುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.

ನ.4ರಿಂದ ಮೊದಲನೆ ಹಂತದಲ್ಲಿ ಬಜೆ ಡ್ಯಾಂನಿಂದ ಮರ್ಣೆ ಸೇತುವೆವರೆಗೆ ಹೂಳು ತೆಗೆಯುವ ಕಾರ್ಯ ಆರಂಭಿಸಲಾಗಿದ್ದು, ಈವರೆಗೆ ಪ್ರತಿದಿನ 250 ಮೆಟ್ರಿಕ್ ಟನ್‌ನಂತೆ ಒಟ್ಟು 2250 ಮೆಟ್ರಿಕ್ ಟನ್ ಮರಳು ತೆಗೆಯಲಾಗಿದೆ. ಮಳೆಯಿಂದಾಗಿ ರಸ್ತೆ ಹದಗೆಟ್ಟ ಪರಿಣಾಮ ಹೆಚ್ಚಿನ ಪ್ರಮಾಣದಲ್ಲಿ ಮರಳು ಸಾಗಾಟಕ್ಕೆ ತೊಂದರೆಯಾಗಿದೆ.

ಡಿ.5ರಿಂದ ಎರಡನೆ ಹಂತದಲ್ಲಿ ಮರ್ಣೆ ಸೇತುವೆಯಿಂದ ಶಿರೂರು ಡ್ಯಾಂ ವರೆಗೆ ಹೂಳುತ್ತೆವ ಕಾರ್ಯ ಕೈಗೆತ್ತಿಕೊಳ್ಳಲಾಗುವುದು. ಇದೀಗ ರಸ್ತೆ ದುರಸ್ತಿ ಯಾಗಿರುವುದರಿಂದ ಎರಡನೆ ಹಂತದಲ್ಲಿ ಪ್ರತಿದಿನ 50-60 ಲೋಡ್ ಮರಳನ್ನು ಸಾಗಿಸಲಾಗುವುದು. ಡಿ.31ಕ್ಕೆ ಹೂಳೆತ್ತುವ ಕಾರ್ಯ ಪೂರ್ಣ ಗೊಳ್ಳಲಿದೆ ಎಂದು ಗುತ್ತಿಗೆ ಕಂಪೆನಿಯ ಎಸ್.ದಯಾನಂದ ಮಲ್ಯ ತಿಳಿಸಿದ್ದಾರೆ.

ನಾಲ್ಕು ಚೆಕ್‌ಪೋಸ್ಟ್ ಸ್ಥಾಪನೆ

ಬಜೆಯಿಂದ ಹೂಳೆತ್ತಲಾದ ಮರಳನ್ನು ಹಿರಿಯಡ್ಕ ಮೈದಾನದಲ್ಲಿ ಸ್ಥಾಪಿಸಿ ರುವ ದಾಸ್ತಾನು ಕೇಂದ್ರದಲ್ಲಿ ಇರಿಸಲಾಗಿದ್ದು, ಪ್ರಸ್ತುತ ಇಲ್ಲಿ 2250 ಮೆಟ್ರಿಕ್ ಟನ್ ಮರಳನ್ನು ಸಂಗ್ರಹಿಸಲಾಗಿದೆ. ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ ಈ ಕೇಂದ್ರದ ಉಸ್ತುವಾರಿ ವಹಿಸಿಕೊಂಡಿದ್ದು, ಸುತ್ತ ತಂತಿಬೇಲಿ ರಚಿಸಿರುವ ಕೇಂದ್ರದಲ್ಲಿ ಐದು ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾ ಗಿದೆ. ಅಲ್ಲದೆ ಭದ್ರತೆಗಾಗಿ ಸೆಕ್ಯುರಿಟಿ ಗಾರ್ಡ್‌ಗಳನ್ನು ನೇಮಿಸಲಾಗಿದೆ.

ಅದೇ ರೀತಿ ಇಲ್ಲಿಂದ ಮರಳು ಸಾಗಿಸುವ ವಾಹನಗಳ ಬಗ್ಗೆ ಕಣ್ಗಾವಲು ಇರಿಸಲು ಪುತ್ತಿಗೆ ಸೇತುವೆ ಬಳಿ, ಹಿರಿಯಡ್ಕ ಕೋಟ್ನಕಟ್ಟೆ, ಕುಕ್ಕೆಹಳ್ಳಿ -ಬಜೆ ಡ್ಯಾಂ ಕ್ರಾಸ್ ಬಳಿ, ಹಿರಿಯಡ್ಕ ದೇವಾಡಿಗರ ಸಭಾಭವನದ ಬಳಿ ಒಟ್ಟು ನಾಲ್ಕು ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಇಲ್ಲಿ ಕೂಡ ಸಿಸಿ ಕ್ಯಾಮೆರಗಳನ್ನು ಅಳವಡಿಸಲಾಗಿದೆ.

ದಾಸ್ತಾನು ಕೇಂದ್ರದಲ್ಲಿ ವೇ ಬ್ರಿಜ್ಡ್ ನಿರ್ಮಿಸಲಾಗಿದ್ದು, ಇದರಲ್ಲಿ ಮರಳು ತುಂಬುವ ಮೊದಲು ಮತ್ತು ಮರಳು ತುಂಬಿದ ನಂತರ ವಾಹನವನ್ನು ತೂಕ ಮಾಡಿಸಲಾಗುತ್ತದೆ. ಜಿಲ್ಲಾ ಮರಳು ಉಸ್ತುವಾರಿ ಸಮಿತಿಯಿಂದ ಮರಳು ದರವನ್ನು ನಿಗದಿ ಪಡಿಸಲಾಗಿದ್ದು, ಇದರ ಆದಾಯ ನಗರಸಭೆಗೆ ಸಂದಾಯ ಆಗಲಿದೆ ಎಂದು ಹಿರಿಯ ಭೂವಿಜ್ಞಾನಿ ರಾಂಜಿ ನಾಯ್ಕ ತಿಳಿಸಿದ್ದಾರೆ.

ಮರಳಿನ ದರ ನಿಗದಿ

ಪ್ರತಿ ಮೆಟ್ರಿಕ್ ಟನ್ ಮರಳಿಗೆ ಲೋಡಿಂಗ್ ಒಳಗೊಂಡಂತೆ 550 ರೂ. ನಿಗದಿಪಡಿಸಲಾಗಿದೆ. 10 ಮೆಟ್ರಿಕ್ ಟನ್‌ನ ದೊಡ್ಡ ಲಾರಿಗೆ 20ಕಿ.ಮೀ.ವರೆಗೆ 3000 ರೂ. ನಂತರ ಪ್ರತಿ ಕಿ.ಮೀ.ಗೆ 50 ರೂ., ಮದ್ಯಮ ಗಾತ್ರದ ಸಾಗಾಣಿಕೆ ವಾಹನಗಳಿಗೆ 20 ಕಿ.ಮೀ.ವರೆಗೆ 2000 ರೂ. ನಂತರದ ಪ್ರತಿ ಕಿ.ಮೀ.ಗೆ 40 ರೂ., ಸಣ್ಣ ಸಾಗಾಣಿಕೆ ವಾಹನಗಳಿಗೆ 20ಕಿ.ಮೀ.ಗೆ ವರೆಗೆ 1500 ರೂ. ಮತ್ತು ನಂತರದ ಪ್ರತಿ ಕಿ.ಮೀ.ಗೆ 35ರೂ. ದರವನ್ನು ನಿಗದಿಪಡಿಸಲಾಗಿದೆ.

ನಿಧಾನ ಪ್ರಕ್ರಿಯೆ ಬಗ್ಗೆ ಡಿಸಿ ಅಸಮಾಧಾನ

ಹಿರಿಯಡ್ಕ ಮರಳು ದಾಸ್ತಾನು ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಜಗದೀಶ್ ಎರಡನೆ ಹಂತದ ಹೂಳೆತ್ತುವ ಪ್ರಕ್ರಿಯೆ ಕುರಿತು ಭೂವಿಜ್ಞಾನಿ ಹಾಗೂ ಪೌರಾಯುಕ್ತರಿಂದ ಮಾಹಿತಿ ಪಡೆದುಕೊಂಡರು.

ಮೊದಲನೆ ಹಂತದ ಹೂಳೆತ್ತುವ ಕಾರ್ಯ ವಿಳಂಬವಾಗುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು. ಡಿ.31ರಂದು ಹಿರಿಯಡ್ಕ ಮೈದಾನವನ್ನು ಸಾರ್ವಜನಿಕರಿಗೆ ಬಿಟ್ಟುಕೊಡುವ ಭರವಸೆ ನೀಡಿದ್ದೇನೆ. ಆದು ದರಿಂದ ಅದರೊಳಗೆ ಎರಡೂ ಹಂತದ ಹೂಳೆತ್ತುವ ಕಾರ್ಯವನ್ನು ಪೂರ್ಣ ಗೊಳಿಸಬೇಕು. ನಾಳೆಯಿಂದ ನಾಲ್ಕು ಬೋಟುಗಳನ್ನು ಬಳಸಿ ಹೂಳೆತ್ತುವ ಕಾರ್ಯವನ್ನು ವೇಗವಾಗಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಗುತ್ತಿಗೆದಾರರಿಗೆ ಖಡಕ್ ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News