ದ.ಕ.ಜಿಲ್ಲಾ ಕಂದಾಯ ಇಲಾಖಾ ನೌಕರರ ಸಂಘಕ್ಕೆ ಆಯ್ಕೆ
Update: 2019-11-25 21:12 IST
ಮಂಗಳೂರು, ನ.25: ಕಂದಾಯ ಇಲಾಖಾ ನೌಕರರ ಸಂಘದ ದ.ಕ.ಜಿಲ್ಲಾ ಸಮಿತಿಯ ಸಭೆಯು ನಗರದ ಕಂದಾಯ ಭವನದಲ್ಲಿ ಇತ್ತೀಚೆಗೆ ಜರುಗಿತು. ನಿಕಟಪೂರ್ವ ಅಧ್ಯಕ್ಷ ನವನೀತ ಮಾಳವ ಅಧ್ಯಕ್ಷತೆ ವಹಿಸಿದ್ದರು.
ಸಮಿತಿಯ ನೂತನ ಅಧ್ಯಕ್ಷರಾಗಿ ಎಂ.ಮಂಜುನಾಥ, ಉಪಾಧ್ಯಾಕ್ಷರಾಗಿ ಜಯಂತ, ಜನಾರ್ದನ ಜಿ., ಪ್ರಧಾನ ಕಾರ್ಯ ದರ್ಶಿಯಾಗಿ ಶಿವಾನಂದ ಯಂ. ಕೋಶಾಧಿಕಾರಿಯಾಗಿ ಪ್ರಸನ್ನ ಕುಮಾರ್ ಪಕ್ಕಳ, ಜತೆ ಕಾರ್ಯದರ್ಶಿಯಾಗಿ ಎನ್.ಜಿ.ಪ್ರಸಾದ್, ಶಕುಂತಳಾ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸುಧಾಕರ್ ಸಾಲಿಯಾನ್, ಕ್ರೀಡಾಕಾರ್ಯದರ್ಶಿಯಾಗಿ ರಂಜಿತ್ ಮತ್ತು ಸೌಮ್ಯ, ಸಂಘಟನಾ ಕಾರ್ಯದರ್ಶಿಯಾಗಿ ಕಾರ್ತಿಕ್, ರಾಜ್ಯ ಸಂಘದ ಪ್ರತಿನಿಧಿಯಾಗಿ ಸುಭಾಷ್, ಲೆಕ್ಕ ಪರಿಶೋಧಕರಾಗಿ ರೇಣುಕಾ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ರವೀಂದ್ರ ಶೆಟ್ಟಿ ಕೆ.ಎಸ್., ಎಂ.ಟಿ ಭೀಮಯ್ಯ, ಪೂರ್ಣಚಂದ್ರ ತೇಜಸ್ವಿ, ಸುರೇಶ್ ಬಾಬು, ಅವಿನಾಶ್, ಭಾಗ್ಯ, ದಿನೇಶ್ ಆಯ್ಕೆಯಾದರು.