ಚಿರತೆಯ ಸೆರೆಗೆ ಅರಣ್ಯ ಇಲಾಖೆಯಿಂದ ಬೋನು

Update: 2019-11-25 16:36 GMT

ಹಿರಿಯಡ್ಕ, ನ.24: ಆತ್ರಾಡಿ ಸಮೀಪದ ಪರೀಕ ಪರಿಸರದಲ್ಲಿ ನ.23ರಂದು ರಾತ್ರಿ ವೇಳೆ ನಾಯಿ ಮೇಲೆ ದಾಳಿ ನಡೆಸಿದ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಅಲ್ಲೇ ಸಮೀಪದ ಹಾಡಿಯಲ್ಲಿ ಇಂದು ಬೋನು ಇರಿಸಿರುವ ಬಗ್ಗೆ ವರದಿಯಾಗಿದೆ.

ಪರೀಕ ಪರಿಸರಕ್ಕೆ ಭೇಟಿ ನೀಡಿದ ಹಿರಿಯಡ್ಕ ಉಪ ವಲಯ ಅರಣ್ಯಾಧಿಕಾರಿ ಜಯರಾಮ್, ಚಿರತೆ ನಾಯಿ ಮೇಲೆ ದಾಳಿ ನಡೆಸಿದ ಮನೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಮನೆಯವರಾದ ದಿನೇಶ್ ಪೂಜಾರಿ ಅವರೊಂದಿಗೆ ಮಾಹಿತಿ ಪಡೆದುಕೊಂಡು, ಸ್ಥಳೀಯರ ಸಲಹೆಯಂತೆ ಚಿರತೆಯ ಸೆರೆಗಾಗಿ ಸಮೀಪದ ಹಾಡಿಯಲ್ಲಿ ನಾಯಿಯೊಂದಿಗೆ ಬೋನು ಇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News