ಶಾಲಾ ಮಕ್ಕಳ ಸಾಗಾಟದ ಕಾರು ಪಲ್ಟಿ: ಹಲವರಿಗೆ ಗಾಯ
Update: 2019-11-25 22:14 IST
ಮಣಿಪಾಲ, ನ.25: ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಓಮ್ನಿ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಬದಿ ಪಲ್ಟಿಯಾದ ಪರಿಣಾಮ ಹಲವು ಮಂದಿ ಮಕ್ಕಳು ಗಾಯಗೊಂಡ ಘಟನೆ ನ.25ರಂದು ಪ್ರಗತಿನಗರದ ಕಾರಂತರ ಕಲಾ ಗ್ರಾಮದ ಬಳಿ ನಡೆದಿದೆ.
ಪ್ರಗತಿ ನಗರದ ವಲಸೆ ಕಾರ್ಮಿಕರ ಮಕ್ಕಳನ್ನು ಕರ್ವಾಲು ಸರಕಾರಿ ಶಾಲೆಗೆ ಕರೆದೊಯ್ಯುತ್ತಿದ್ದ ಓಮ್ನಿ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಯಿತ್ತೆನ್ನ ಲಾಗಿದೆ. ಕಾರಿನಲ್ಲಿ 20ಕ್ಕೂ ಅಧಿಕ ಮಕ್ಕಳಿದ್ದು ಅದರಲ್ಲಿ 15 ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿರುವ ಬಗ್ಗೆ ತಿಳಿದುಬಂದಿದೆ.
ಈ ಶಾಲಾ ಮಕ್ಕಳಿಗೆ ಉಡುಪಿ ನಗರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡ ಲಾಗಿದೆ. ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.