ಉಡುಪಿ: ನ. 26ರಂದು ಸಮಗ್ರ ಕೃಷಿ ಮಾಹಿತಿ
Update: 2019-11-25 22:18 IST
ಉಡುಪಿ, ನ.25: ಉಡುಪಿ ಜಿಲ್ಲಾ ಕೃಷಿಕ ಸಂಘವು ಸಮಗ್ರ ಕೃಷಿ ಮಾಹಿತಿ ಕಾರ್ಯಕ್ರಮವೊಂದನ್ನು ನಾಳೆ ನ. 26ರ ಬೆಳಗ್ಗೆ 11 ಗಂಟೆಗೆ ಉಡುಪಿಯ ಹೋಟೆಲ್ ಉಡುಪಿ ರೆಸಿಡೆನ್ಸಿಯ ೂಫ್‌ಟಾಪ್ ಸಭಾಂಗಣದಲ್ಲಿ ಆಯೋಜಿಸಿದೆ.
ಶಿಬಿರದಲ್ಲಿ ಮಾಹಿತಿದಾರರಾಗಿ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು, ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್ ಬಾಗವಹಿಸಲಿ ದ್ದಾರೆ.
ವೈಜ್ಞಾನಿಕವಾಗಿ ಕಡಿಮೆ ಖರ್ಚಿನಲ್ಲಿ ಲಾಭದಾಯಕವಾಗಿ ವಿವಿಧ ಬೆಳೆಗಳ ಕೃಷಿ ಮಾಡುವ ಕ್ರಮಗಳು, ಅವುಗಳ ನಾಟಿ, ಕೀಟ-ರೋಗ ಬಾಧೆಗಳ ನಿರ್ವಹಣೆ ಕುರಿತು ಸಮಗ್ರ ಮಾಹಿತಿ ನೀಡಲಾಗುವುದು ಎಂದು ಕೃಷಿಕ ಸಂಘದ ಪ್ರಕಟಣೆ ತಿಳಿಸಿದೆ.