ಯುರೇಕಾ- 2019: ಉಪ್ಪಿನಂಗಡಿ ಸರಕಾರಿ ಶಾಲೆ ಪ್ರಥಮ
ಉಪ್ಪಿನಂಗಡಿ : ನೆಲ್ಯಾಡಿಯ ಜ್ಞಾನೋದಯ ಬೆಥನಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ಯುರೇಕಾ- 2019 ವಿಜ್ಞಾನ ಮತ್ತು ಕಲಾ ಸ್ಪರ್ಧೆಯ ವಿಜ್ಞಾನ - ತಂತ್ರಜ್ಞಾನ -ಭೂ ಮಂಡಲ ವಿಭಾಗದಲ್ಲಿ ಭಾಗವಹಿಸಿದ ಉಪ್ಪಿನಂಗಡಿ ಸರಕಾರಿ ಮಾದರಿ ಉನ್ನತ ಪ್ರಾಥಮಿಕ ಶಾಲಾ 8 ನೇ ತರಗತಿಯ ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.
ಶಾಲೆಯ ಸುಶ್ಮಿತಾ , ಫಾತಿಮಾ ಶಮ್ನಾ, ಕಾರುಣ್ಯಶ್ರೀ , ಫಾತಿಮತ್ ಶಹಾಮಾ ಹಾಗೂ ಖತಿಜತ್ ಅಝ್ಮಿಯಾ ಎಂಬ ವಿದ್ಯಾರ್ಥಿನಿಯರ ತಂಡ ವಿಜ್ಞಾನ - ತಂತ್ರಜ್ಞಾನ -ಭೂ ಮಂಡಲ ವಿಷಯದಲ್ಲಿ ಮಂಡಿಸಿದ ಸಂಶೋಧನೆಯು ಪ್ರಥಮ ಸ್ಥಾನವನ್ನು ನಗದು ಪುರಸ್ಕಾರದೊಂದಿಗೆ ಪಡೆದಿದೆ.
ಇದೇ ಕಾರ್ಯಕ್ರಮದಲ್ಲಿ ಪ್ರಾಥಮಿಕ ವಿಭಾಗದ ಮಣ್ಣಿನ ಮಾದರಿ ಸ್ಪರ್ಧೆಯಲ್ಲಿ ಇದೇ ಶಾಲೆಯ ಅಕ್ಷಯ್ ಬಿ.ಎನ್. ಮತ್ತು ಪ್ರಸನ್ನರವರ ತಂಡ ದ್ವಿತೀಯ ಸ್ಥಾನವನ್ನು ಪಡೆದಿದೆ. ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಕಿ ಕೃಷ್ಣವೇಣಿ ಹಾಗೂ ಮಧುಶ್ರೀ ಮಾರ್ಗದರ್ಶನ ನೀಡಿದ್ದಾರೆ ಎಂದು ಶಾಲಾ ಪ್ರಕಟನೆ ತಿಳಿಸಿದೆ.