ನ. 27ರಿಂದ ಆಳ್ವಾಸ್ ಕಾಲೇಜಿನಲ್ಲಿ ಅಂತರ್ ರಾಷ್ಟ್ರೀಯ ಸಮ್ಮೇಳನ
ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನ. 27, 28 ಮತ್ತು 29 ರಂದು ಲೇಸರ್ ಡಿಪೊಸಿಟೆಷನ್: ನ್ಯಾನೋ ಸ್ಟ್ರಕ್ಚರ್, ಹೆಟೆರೋಸ್ಟ್ರಕ್ಚರ್ ಮತ್ತು 2ಡಿ ಲೇಯರ್ಸ್ ( ಐಕ್ಲೌಡ್ - 2019) ಎಂಬ ವಿಷಯದ ಮೇಲೆ ಅಂತರಾಷ್ಟ್ರೀಯ ಸಮ್ಮೇಳನವು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ನಡೆಯಲಿದೆ.
ಸುರತ್ಕಲ್ ಎನ್.ಐ.ಟಿ.ಕೆಯ ನಿರ್ದೇಶಕರಾದ ಡಾ. ಕರನಂ ಉಮಾ ಮಹೇಶ್ವರ ರಾವ್ ಉದ್ಘಾಟನೆಗೊಳಿಸಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಜರ್ಮನಿಯ ಡಾ. ಬರ್ಕ್‍ಹಾಡ್ ಫೆಚ್ನರ್, ಐ.ಐ.ಟಿ ಮದ್ರಾಸ್ ಡಾ.ಎಸ್ ರಾಮಚಂದ್ರ ರಾವ್ ಆಗಮಿಸಲಿದ್ದಾರೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಮ್ ಮೋಹನ ಆಳ್ವ , ಟ್ರಸ್ಟೀ ವಿವೇಕ್ ಆಳ್ವ ಮತ್ತು ಸಂಯೋಜಕ ಡಾ. ರಿಚರ್ಡ್ ಪಿಂಟೊ ಪ್ರಾಂಶುಪಾಲರಾದ ಡಾ. ಪೀಟರ್ ಫೆನಾರ್ಂಡಿಸ್ ಉಪಸ್ಥಿತರಿರಲಿದ್ದಾರೆ. ಉದ್ಘಾಟನೆಯ ನಂತರ ಡಾ. ಫ್ರೇಲಿಯರ್ ಸಿಎನ್ ಅರ್ ಎಸ್ , ಯುಎಮ್ ಅರ್ ಫ್ರಾನ್ಸ್ ಅವರಿಂದ ವಿಷಯ ಮಂಡನೆಗೊಳ್ಳಲಿದೆ.
ಸಮ್ಮೇಳನವು ವಿಭಿನ್ನ ವೈಜ್ಞಾನಿಕ ಮತ್ತು ತಾಂತ್ರಿಕ ಅವಧಿಗಳನ್ನು ಹೊಂದಿದೆ. ಸಿಎನ್‍ಅರೆಸ್ ಯುಎಂಆರ್, ಫ್ರಾನ್ಸ್, ಕುಮಾಮೊಟೊ ವಿಶ್ವವಿದ್ಯಾಲಯ-ಜಪಾನ್ ಕೇಂದ್ರ ಸಂಸ್ಥೆಗಳಾದ ಐಐಟಿ ಮದ್ರಾಸ್, ಐಐಟಿ ದೆಹಲಿ, ಐಐಟಿ ಹೈದರಾಬಾದ್, ಐಐಎಸ್‍ಆರ್-ಪುಣೆ, ಕುಸಾಟ್-ಕೊಚ್ಚಿನ್, ಐಐಎಸ್‍ಆರ್-ತಿರುವನಂತಪುರ, ಡಾಯಟ್ -ಪುಣೆ, ಎನ್‍ಐಟಿ ಕ್ಯಾಲಿಕಟ್, ಎನ್‍ಐಟಿಕೆ ಸುರತ್ಕಲ್ ಮುಂತಾದ ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರಸಿದ್ಧ ವಿಜ್ಞಾನಿಗಳಿಂದ 4 ಮುಖ್ಯ ಭಾಷಣ, 3 ಸಮಗ್ರ ಮಾತುಕತೆ ಮತ್ತು 23 ಆಹ್ವಾನಿತ ಉಪನ್ಯಾಸಗಳು ನಡೆಯಲಿದೆ. ಪ್ರಪಂಚದಾದ್ಯಂತದ ಸಂಶೋಧಕರ 70 ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ಮಂಡನೆಗೊಳ್ಳಲಿವೆ.