ಉಳ್ಳಾಲ: ಪ್ರವಾದಿ ಸ್ನೇಹ, ಮೀಲಾದ್ ನೈಟ್ ಕಾರ್ಯಕ್ರಮ
ಉಳ್ಳಾಲ: ಎಸ್‌ವೈಎಸ್ ಉಳ್ಳಾಲ ಸೆಂಟರ್, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಮತ್ತು ತೊಕೊಟ್ಟು ಸೆಕ್ಟರ್ ಇದರ ಜಂಟಿ ಆಶ್ರಯದಲ್ಲಿ ಇತ್ತೀಚೆಗೆ ಪ್ರವಾದಿ ಸ್ನೇಹ ಮತ್ತು ಸಂದೇಶ ಭಾಷಣ ಕಾರ್ಯಕ್ರಮವು ಹಾಶಿಂ ಗ್ರೌಂಡ್, ಅಝಾದ್ ನಗರದಲ್ಲಿ ನಡೆಯಿತು.
ಎಮ್.ಸಿ. ಫೈಝಿ ಉಸ್ತಾದ್, ಜಲಾಲ್ ತಂಙಳ್ ರವರ ನೇತೃತ್ವದಲ್ಲಿ ಮಾದರಿ ಮೌಲಿದ್ ಮಜ್ಲಿಸ್ ನಡೆಸಲಾಯಿತು. ಎಸ್‌ವೈಎಸ್ ಜಿಲ್ಲಾ ಖಜಾಂಜಿ ಹನೀಫ್ ಹಾಜಿ ಅಧ್ಯಕ್ಷತೆಯಲ್ಲಿ ಎಮ್‌ಸಿ ಫೈಝಿ ಉಸ್ತಾದ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮುಖ್ಯ ಪ್ರಭಾಷಣವನ್ನು ಶಿಯಾಬುದ್ದೀನ್ ಸಖಾಫಿ, ಆಝಾದ್ ನಗರ ಮಸೀದಿಯ ಖತೀಬ್ ಕಲಂದರ್ ಸಖಾಫಿ ಆಶಂಸ ಭಾಷಣಗೈದರು. ವೇದಿಕೆಯಲ್ಲಿ ಎಸ್ಸೆಸ್ಸೆಫ್ ಉಳ್ಳಾಲ ಡಿವಿಶನ್ ಅಧ್ಯಕ್ಷ ಖುಬೈಬ್ ತಂಙಳ್, ಮುಸ್ತಫ ಮದನಿ, ಜಾಬಿರ್ ಫಾಳಲಿ, ಎಸ್‌ವೈಎಸ್ ಉಳ್ಳಾಲ ಸೆಂಟರ್ ಪ್ರಧಾನ ಕಾರ್ಯದರ್ಶಿ ಇಶಾಕ್, ಕೋಶಾಧಿಕಾರಿ ಅಬ್ದುಸ್ಸಮದ್ ಮುಕ್ಕಚೇರಿ, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷ ಶಬೀರ್ ಪೇಟೆ ಉಪಸ್ಥಿತರಿದ್ದರು. ಎಸ್‌ವೈಎಸ್ ಉಳ್ಳಾಲ ಸೆಂಟರ್ ಇದರ ಅಧ್ಯಕ್ಷ ಬಶೀರ್ ಸಖಾಫಿ ಸ್ವಾಗತಿಸಿ, ಮುಸ್ತಫ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.