×
Ad

ಸುಧಾರಿತ ಹೈನುಗಾರಿಕೆ ಪದ್ಧತಿ ಕುರಿತು ತರಬೇತಿ

Update: 2019-11-26 19:41 IST

ಉಡುಪಿ, ನ.26: ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಂಗಳವಾರ ಸುಧಾರಿತ ಹೈನುಗಾರಿಕೆ ಪದ್ಧತಿ ಕುರಿತಂತೆ ತರಬೇತಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಯಶೋದ ಸುವರ್ಣ, ಜಿಲ್ಲೆಯ ರೈತರಿಗೆ ಈ ತರಬೇತಿ ಕಾರ್ಯಕ್ರಮದ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳುವಂತೆ ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಯಶೋದ ಸುವರ್ಣ, ಜಿಲ್ಲೆಯ ರೈತರಿಗೆ ಈ ತರಬೇತಿ ಕಾರ್ಯಕ್ರಮದ ಸಂಪೂರ್ಣ ಮಾಹಿತಿ ಯನ್ನು ಪಡೆದುಕೊಳ್ಳುವಂತೆ ತಿಳಿಸಿದರು. ಕೆ.ವಿ.ಕೆ. ಬ್ರಹ್ಮಾವರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ.ಬಿ. ಧನಂಜಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಡಾ. ವರ್ಗಿಸ್ ಕುರಿಯನ್ ಅವರ ಕ್ಷೀರ ಕ್ರಾಂತಿಯ ಸಾಧನೆಗಳ ಕುರಿತು ರೈತರಿಗೆ ವಿವರಿಸಿದರು.

ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಸಹ ಪ್ರಾದ್ಯಾಪಕ ಡಾ.ವಿನೋದ್, ಭಾರತವು ಅತ್ಯಂತ ಹೆಚ್ಚು ಹಾಲು ಉತ್ಪಾದನೆ ಮಾಡುವ ದೇಶ. ಹೈನುಗಾರಿಕೆ ಎಷ್ಟೋ ಜನರಿಗೆ ತಮ್ಮ ಬದುಕು ರೂಪಿಸಿಕೊಳ್ಳಲು ಸಹಾಯವಾಗಿದೆ ಎಂದು ವಿವರಿಸಿ, ಹಾಲು ಉತ್ಪಾದನೆ ಬೆಳೆದು ಬಂದ ಹಾದಿಯನ್ನು ಸಂಕ್ಷಿಪ್ತವಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಕೆ.ವಿ.ಕೆ ಬ್ರಹ್ಮಾವರದ ವೈಜ್ಞಾನಿಕ ಸಲಹಾ ಸಮಿತಿಯ ಸದಸ್ಯ ಗೋಪಾಲ ಪೂಜಾರಿ, ಸಾಣೂರು ಪ್ರಗತಿಪರ ಕೃಷಿಕ ಜ್ಞಾನದೇವ್ ಉಪಸ್ಥಿತರಿದ್ದರು. ಶ್ರೀನಿವಾಸ್ ಹೆಚ್. ಹುಲಕೋಟಿ ಸ್ವಾಗತಿಸಿದರು. ಡಾ. ಎನ್. ಈ. ನವೀನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News