ಗ್ರಾಮ ಮಟ್ಟದಲ್ಲಿ ಮಣ್ಣು ರೀಕ್ಷಾ ಘಟಕ ಸ್ಥಾಪನೆಗೆ ಅರ್ಜಿ ಆಹ್ವಾನ
ಉಡುಪಿ, ನ. 26: ಗ್ರಾಮೀಣ ಯುವ ಜನರಿಗೆ ಉದ್ಯೋಗಾವಕಾಶವನ್ನು ಸೃಷ್ಟಿಸುವ ಮತ್ತು ನಿಗದಿತ ಅವಧಿಯಲ್ಲಿ ಮಣ್ಣು ಮಾದರಿಗಳ ವಿಶ್ಲೇಷಣೆಯನ್ನು ಉತ್ತಮಗೊಳಿಸುವ ಉದ್ದೇಶದೊಂದಿಗೆ ಜಿಲ್ಲೆಯಲ್ಲಿ 2019-20ನೇ ಸಾಲಿನಲ್ಲಿ ಬಾಕಿ ಉಳಿದ ಒಂದು ಗ್ರಾಮ ಮಟ್ಟದ ಮಣ್ಣು ಪರೀಕ್ಷಾ ಘಟಕದ ಸ್ಥಾಪನೆಗೆ ಆಸಕ್ತ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಗ್ರಾಮ ಮಟ್ಟದ ಮಣ್ಣು ಪರೀಕ್ಷಾ ಘಟಕದ ಪರಿಷ್ಕೃತ ಮಾರ್ಗಸೂಚಿಯನ್ವಯ ಕೃಷಿ-ಕ್ಲಿನಿಕ್ ಮತ್ತು ಕೃಷಿ ವ್ಯಾಪಾರ ಕೇಂದ್ರಗಳು, ಕೃಷಿ ಉದ್ದಿಮೆದಾರರು, ಮಾಜಿ ಯೋಧರು, ಸ್ವಸಹಾಯ ಸಂಘಗಳು, ರೈತರ ಉತ್ಪಾದಕರ ಸಂಸ್ಥೆಗಳು, ರೈತ ಉತ್ಪನ್ನ ಕಂಪನಿಗಳು, ರೈತರ ಜಂಟಿ ಜವಾಬ್ದಾರಿ ಗುಂಪುಗಳು, ರೈತರ ಸಹಕಾರ ಸಂಘಗಳು,ಪರಿಕರ ರಿಟೇಲ್ ಔಟ್‌ಲೆಟ್‌ಗಳು, ಪರಿಕರಗಳ ರಿಟೇಲ್‌ದಾರರನ್ನು ಪಲಾನುಭವಿಗಳಾಗಿ ಆಯ್ಕೆ ಮಾಡಬಹುದು.
ಫಲಾನುಭವಿಗಳು ಕನಿಷ್ಟ ಎಸೆಸೆಲ್ಸಿಯಲ್ಲಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣ ರಾಗಿರಬೇಕು. ವಿಜ್ಞಾನ ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಅಭ್ಯರ್ಥಿ ಗಳು ಅರ್ಜಿಗಳನ್ನು ತಾಲೂಕುಗಳ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಹೋಬಳಿ ಮಟ್ಟದಲ್ಲಿರುವ ರೈತ ಸಂಪರ್ಕ ಕೇಂದ್ರಗಳಿಂದ ಪಡೆದು, ಅಗತ್ಯ ದಾಖಲಾತಿಗಳೊಂದಿಗೆ ಭರ್ತಿ ಮಾಡಿ, ಜಂಟಿ ಕೃಷಿ ನಿರ್ದೇಶಕರ ಕಚೇರಿ, ರಜತಾದ್ರಿ, ಮಣಿಪಾಲ ಇಲ್ಲಿಗೆ ಡಿ.24ರೊಳಗೆ ಸಲ್ಲಿಸಬೇಕು.
ಅ್ಯರ್ಥಿಗಳು ಕನಿಷ್ಠ 4 ವರ್ಷಗಳ ಕಾಲ ಪ್ರಯೋಗಾಲಯವನ್ನು ನಡೆಸ ಬೇಕು. ಜಿಲ್ಲಾ ಮಟ್ಟದಲ್ಲಿ ಸ್ವೀಕೃತವಾಗುವ ಅರ್ಜಿಗಳನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಸಲಾಗುವ ಜಿಲ್ಲಾ ಮಟ್ಟದ ಕಾರ್ಯಕಾರಿ ಸಮಿತಿಯಲ್ಲಿ ಪರಿಶೀಲಿಸಿ,ಅಂತಿಮವಾಗಿ ಘಟಕ ಸ್ಥಾಪನೆಗೆ ಅ್ಯರ್ಥಿಗಳನ್ನು ಆಯ್ಕೆ ಮಾಡ ಲಾಗುವುದು. ಪ್ರತಿ ಘಟಕದ ಗರಿಷ್ಟ ವೆಚ್ಚ 5 ಲಕ್ಷ ರೂ.ಗಳಾಗಿದ್ದು, ಶೇ.75 ರಷ್ಟನ್ನು ಸಬ್ಸಿಡಿಯಾಗಿ ನೀಡಲಾಗುತ್ತದೆ. ಉಳಿಕೆ ಶೇ.25ರಷ್ಟನ್ನು ಉದ್ದಿಮೆದಾ ರರು ಭರಿಸಬೇಕು. ಆದರ್ಶ ಸಂಸದ ಗ್ರಾಮ ಯೋಜನೆ ವ್ಯಾಪ್ತಿಯ ಅರ್ಜಿದಾರರಿಗೆ ಮಾರ್ಗಸೂಚಿಯನ್ವಯ ಆದ್ಯತೆ ನೀಡಲಾಗುವುದು ಎಂದು ಜಂಟಿ ಕೃಷಿ ನಿದೆಶರ್ಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.