ಕಾಶ್ಮೀರದಲ್ಲಿ ಪ್ರಚೋದನಾಕಾರಿ ಮಾತುಗಳಿಗೆ ತಡೆ ಅಗತ್ಯ: ಕೇಂದ್ರ

Update: 2019-11-26 16:37 GMT
PTI

ಹೊಸದಿಲ್ಲಿ, ನ. 26: ಜಮ್ಮು ಹಾಗೂ ಕಾಶ್ಮೀರದಲ್ಲಿ ಮಾತು ಮತ್ತು ಅಭಿವ್ಯಕ್ತಿ ನಿಷೇಧ ಹೇರಿಲ್ಲ. ಆದರೆ, ಪ್ರಚೋದನಾಕಾರಿ ಮಾತು ನಿಲ್ಲಿಸಬೇಕು ಎಂದು ಕೇಂದ್ರ ಸರಕಾರ ಮಂಗಳವಾರ ಹೇಳಿದೆ.

ಜಮ್ಮು ಹಾಗೂ ಕಾಶ್ಮೀರದಲ್ಲಿ ಸಂವಹನ ಹಾಗೂ ಇತರ ನಿರ್ಬಂಧಗಳನ್ನು ಹೇರಿರುವ ಹಿನ್ನೆಲೆಯಲ್ಲಿ ಕಾಶ್ಮೀರಿ ಟೈಮ್ಸ್‌ನ ಸಂಪಾದಕಿ ಆರುಂಧತಿ ಭಾಸಿನ್ ಹಾಗೂ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಝಾದ್ ಸಲ್ಲಿಸಿದ ದೂರಿನ ವಿರುದ್ಧ ಕೇಂದ್ರವನ್ನು ಪ್ರತಿನಿಧಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು.

ಮಾತು ಹಾಗೂ ಅಭಿವ್ಯಕ್ತಿಗೆ ನಿಷೇಧ ಹೇರಿಲ್ಲ. ಇದೇ ಸಂದರ್ಭ ಉತ್ತೇಜನಕಾರಿ ಹಾಗೂ ಪ್ರಚೋದನಾತ್ಮಕ ಮಾತುಗಳನ್ನು ನಿಲ್ಲಿಸಬೇಕು ಎಂದು ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಪೀಠಕ್ಕೆ ಮೆಹ್ತಾ ತಿಳಿಸಿದರು.

ಜಮ್ಮು ಹಾಗೂ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಧಿ 370ನ್ನು ಕೇಂದ್ರ ಸರಕಾರ ಆಗಸ್ಟ್‌ನಲ್ಲಿ ರದ್ದುಗೊಳಿಸಿತ್ತು ಹಾಗೂ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತ್ತು. ಈ ಹಿನ್ನೆಲೆಯಲ್ಲಿ ಈ ಜಮ್ಮು ಹಾಗೂ ಕಾಶ್ಮೀರದಲ್ಲಿ ದೂರವಾಣಿ ಹಾಗೂ ಅಂತರ್ಜಾಲ ಸೇವೆಯನ್ನು ರದ್ದುಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News