×
Ad

ಕೆಎಸ್‌ಸಿಎ ಕ್ರಿಕೆಟ್ ಮಾಧವ ಕೃಪಾ ತಂಡಕ್ಕೆ 308 ರನ್‌ಗಳ ಜಯ

Update: 2019-11-26 22:22 IST

ಮಣಿಪಾಲ, ನ.21: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಶ್ರಯದಲ್ಲಿ ಮಣಿಪಾಲದಲ್ಲಿ ನಡೆದಿರುವ ಉಡುಪಿ ಜಿಲ್ಲಾ ಅಂತರ್ ಶಾಲಾ ಕ್ರಿಕೆಟ್ ಪಂದ್ಯಾಟದಲ್ಲಿ ಮಣಿಪಾಲದ ಮಾಧವಕೃಪಾ ತಂಡವು ಉಡುಪಿಯ ವಿದ್ಯೋದಯ ಶಾಲಾ ತಂಡದ ವಿರುದ್ಧ 308 ರನ್‌ಗಳ ಅಂತರದ ಭರ್ಜರಿ ಜಯ ದಾಖಲಿಸಿತು.

ಮೊದಲು ಬ್ಯಾಟಿಂಗ್ ನಡೆಸಿದ ಮಾಧವ ಕೃಪಾ ತಂಡ ನಿಗದಿತ 50 ಓವರುಗಳಲ್ಲಿ 7 ವಿಕೆಟ್‌ಗೆ 333 ರನ್‌ಗಳಿಸಿತು. ತಂಡದ ಕೀರ್ತನ್ (69), ರಿಷಬ್(55), ಆರ್ಯನ್(35), ಅಭಿಜಿತ್ (29) ರನ್‌ಗಳಿಸಿದರು. ಉತ್ತರ ವಾಗಿ ವಿದ್ಯೋದಯ ತಂಡ ಕೇವಲ 25 ರನ್‌ಗಳಿಗೆ ಆಲೌಟಾಯಿತು.

ಶನಿವಾರ ನಡೆದ ಪಂದ್ಯದಲ್ಲಿ ಮಾಧವ ಕೃಪಾ ತಂಡ, ಕಾಪುವಿನ ದಂಡತೀರ್ಥ ಶಾಲಾ ತಂಡವನ್ನು 10 ವಿಕೆಟ್‌ಗಳಿಂದ ಸೋಲಿಸಿತ್ತು. ಮೊದಲು ಬ್ಯಾಟಿಂಗ್ ನಡೆಸಿದ ದಂಡತೀರ್ಥ ತಂಡ 109 ರನ್ ಗಳಿಸಿದರೆ ಉತ್ತರವಾಗಿ ಮಾಧವ ಕೃಪಾ, ವಿಕೆಟ್ ಕಳೆದುಕೊಳ್ಳದೇ 112 ರನ್‌ಗಳಿಸಿ ಜಯಶಾಲಿಯಾಯಿತು.

ಅಂತರ್ ಪದವಿ ಪೂರ್ವ ಕಾಲೇಜುಗಳ ಪಂದ್ಯಾಟದಲ್ಲಿ ಕಾಪು ದಂಡತೀರ್ಥ ಪಿಯು ಕಾಲೇಜು ತಂಡ, ಉಡುಪಿಯ ಶಾರದ ರೆಸಿಡೆನ್ಶಿಯಲ್ ಶಾಲಾ ತಂಡವನ್ನು 70 ರನ್‌ಗಳಿಂದ, ಬ್ರಹ್ಮಾವರದ ಎಸ್‌ಎಂಎಸ್ ಪಿ.ಯು ಕಾಲೇಜು ತಂಡ, ಉಡುಪಿಯ ಎಂಜಿಎಂ ಪಿಯು ಕಾಲೇಜು ತಂಡವನ್ನು 102 ನ್‌ಗಳ ಅಂತರದಿಂದ ಸೋಲಿಸಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News