ನ. 29ಕ್ಕೆ ಪರಿಸರ ಜಾಗೃತಿಗಾಗಿ ಸಂಗೀತ ಕಾರ್ಯಕ್ರಮ
Update: 2019-11-26 22:31 IST
ಮಣಿಪಾಲ, ನ.26: ಪರಿಸರ ಮಾಲಿನ್ಯ, ಜಾರುತ್ತಿರುವ ಬೆಟ್ಟಗುಡ್ಡಗಳು, ನಶಿಸುತ್ತಿರುವ ಕಲೆ, ಸಮುದ್ರಗಳು, ಪ್ಲಾಂಟೇಶನ್ಗಳು ಮತ್ತು ವನ್ಯಜೀವಿಗಳ ರಕ್ಷಣೆಗಾಗಿ ಜಾಗೃತಿ ಮೂಡಿಸುವ ಉದ್ದೇಶದಿಂದ ‘ಪ್ಲೇ ಫಾರ್ ಎ ಕಾಸ್’ ಸರಣಿಯಲ್ಲಿ ಇದೇ ನ.29ರ ಶುಕ್ರವಾರ ಮಣಿಪಾಲ ಸೇರಿದಂತೆ ಭಾರತದ 27 ನಗರಗಳಲ್ಲಿ ಏಕಕಾಲಕ್ಕೆ 100 ಸಂಗೀತ ಕಾರ್ಯಕ್ರಮ ನಡೆಯಲಿದೆ.
ಪರಿಕ್ರಮ, ದೆಹಲಿ ಇಚಿಡಿ ಪ್ರಾಜೆಕ್ಟ್, ಇಂಡಸ್ ಕ್ರೀಡ್, ದಿ ಲೋಕಲ್ ಟ್ರೇನ್, ಉಷಾ ಉತ್ತುಪ್, ಹರಿ ಸುಖ್ಮಣಿ ಮತ್ತು ಅಂಕುರ್ ತಿವಾರಿ ಸೇರಿದಂತೆ ಖ್ಯಾತನಾಮ ಗಾಯಕರು ಮತ್ತು ಬ್ಯಾಂಡ್ಗಳು ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.
ಹಸಿದ ಬಡವರಿಗೆ ಆಹಾರ ಒದಗಿಸುವುದು, ಏಕಬಳಕೆಯ ಪ್ಲಾಸ್ಟಿಕ್, ಮಳೆ ನೀರು ಕೊಯ್ಲು ಸೇರಿದಂತೆ ಪ್ರಮುಖ ಸಾಮಾಜಿಕ ಕಳಕಳಿಯನ್ನಿಟ್ಟುಕೊಂಡು ಈ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಪೆರ್ನಾಡ್ ರಿಕಾರ್ಡ್ ಇಂಡಿಯಾದ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಕಾರ್ತಿಕ್ ಮಹೀಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.