ಕಾರಿನ ಗಾಜು ಒಡೆದು ಸೊತ್ತು ಕಳವು
Update: 2019-11-26 22:35 IST
ಉಡುಪಿ, ನ.26: ನಗರದ ಕಲ್ಸಂಕ ವಿ ಲೈಟ್ಸ್ ಎದುರು ಪಾರ್ಕ್ ಮಾಡಿದ್ದ ಕಾರಿನ ಗಾಜು ಒಡೆದು ಅದರಲ್ಲಿದ್ದ ಸೊತ್ತುಗಳನ್ನು ಕಳವು ಮಾಡಿರುವ ಘಟನೆ ನ.25ರಂದು ಸಂಜೆ ವೇಳೆ ನಡೆದಿದೆ.
ಬನ್ನಂಜೆಯ ಜಾಕೋ ಕೆ.ಕೆ. ಎಂಬವರು ತನ್ನ ಕಾರಿನಲ್ಲಿ ಉಡುಪಿ ರಾಜ್ ಟವರ್ಸ್‌ನಲ್ಲಿರುವ ವೈದ್ಯರ ಬಳಿ ಹೆಂಡತಿ ಮಗುವಿನೊಂದಿಗೆ ಬಂದಿದ್ದು, ಈ ವೇಳೆ ಅವರು ಕಾರನ್ನು ಕಲ್ಸಂಕ ಬಳಿ ಇರುವ ವಿ-ಲೈಟ್ಸ್ ಅಂಗಡಿಯ ಎದುರಿನ ರಸ್ತೆ ಬದಿ ನಿಲ್ಲಿಸಿದ್ದರೆನ್ನಲಾಗಿದೆ.
ಈ ಸಂದರ್ಭ ಕಾರಿನ ಹಿಂಬದಿಯ ಬಾಗಿಲಿನ ಗಾಜು ಪುಡಿ ಮಾಡಿದ ಕಳ್ಳರು, ಹಿಂದಿನ ಸೀಟಿನಲ್ಲಿ ಇಟ್ಟಿದ್ದ 1.20 ಲಕ್ಷ ರೂ. ಮೌಲ್ಯದ ಲ್ಯಾಪ್‌ಟಾಪ್, ಮತ್ತು 10ಸಾವಿರ ರೂ. ಮೌಲ್ಯದ ಮೊಬೈಲ್ ಗಳನ್ನು ಕಳವು ಮಾಡಿದ್ದಾರೆಂದು ದೂರಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.