ತಂಡದಿಂದ ವಿದ್ಯಾರ್ಥಿಗಳಿಗೆ ಹಲ್ಲೆ: ದೂರು
Update: 2019-11-26 22:36 IST
ಉಡುಪಿ, ನ.26: ಯುವಕರ ತಂಡವೊಂದು ಉಡುಪಿ ವಿದ್ಯೋದಯ ಕಾಲೇಜಿನ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿರುವ ಘಟನೆ ನ.25ರಂದು ನಡೆದಿದೆ.
ಉಡುಪಿ ವಿದ್ಯೋದಯ ಕಾಲೇಜಿನಲ್ಲಿ ನ.23ರಂದು ವಿದ್ಯಾರ್ಥಿ ಅಕ್ಷಯ್ ಶೆಟ್ಟಿ ಎಂಬಾತನಿಗೆ ದೈಹಿಕ ಹಲ್ಲೆ ನಡೆಸಿರುವ ಬಗ್ಗೆ ಅವರ ಪೋಷಕರು ತಿಳಿಸಿರುವಂತೆ ನ.25ರಂದು ಅವರನ್ನು ಬರಹೇಳಿ ವಿದ್ಯಾರ್ಥಿಗಳ ಜೊತೆ ಕಳುಹಿಸಿಕೊಟ್ಟಿದ್ದು, ಆದರೆ ಅವರು ಮನೆಗೆ ತೆರಳದೆ ಸುಮಾರು 10-12 ಮಂದಿ ಬೇರೆ ಕಾಲೇಜು ವಿದ್ಯಾರ್ಥಿಗಳನ್ನು ಸೇರಿಸಿ ವಿದ್ಯೋದಯ ಕಾಲೇಜಿನ ಅಪ್ರಾಪ್ತ ವಿದ್ಯಾರ್ಥಿ ಗಳ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆಂದು ದೂರಲಾಗಿದೆ.
ಆ ವೇಳೆ ಉಪನ್ಯಾಸಕರು ತೆರಳಿ ಹೊರಗಿನಿಂದ ಬಂದ ವ್ಯಕ್ತಿಗಳಿಂದ ವಿದ್ಯಾರ್ಥಿಗಳನ್ನು ರಕ್ಷಿಸಿ ಕಾಲೇಜಿನಲ್ಲಿ ಆಶ್ರಯ ನೀಡಿರುವು ದಾಗಿ ಕಾಲೇಜಿನ ಪ್ರಾಂಶುಪಾಲ ಎ.ಎಲ್.ಅಚ್ಚುತ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.