×
Ad

ಡಿ.1ರಿಂದ ‘ತುಳುನಾಡ ಬಂಗಾರ್ ಗರೋಡಿಲು’ ಸಾಕ್ಷಚಿತ್ರ ಪ್ರಸಾರ

Update: 2019-11-27 20:21 IST

ಉಡುಪಿ, ನ.27: ದಿ ಸ್ವಸ್ತಿಕ್ ಪ್ರೊಡಕ್ಷನ್ ಅರ್ಪಿಸುವ ಮುದ್ರಾಡಿ ಸುರೇಂದ್ರ ಮೋಹನ್ ಸಾರಥ್ಯದಲ್ಲಿ ತಯಾರಿಸಿರುವ ‘ತುಳುನಾಡ ಬಂಗಾರ್ ಗರೋಡಿಲು’ ಸಾಕ್ಷಚಿತ್ರ ನಮ್ಮ ಕುಡ್ಲ ಚಾನೆಲ್‌ನಲ್ಲಿ ಡಿ.1ರಿಂದ ಪ್ರಸಾರಗೊಳ್ಳಲಿದೆ.

ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಬನ್ನಂಜೆ ಬಾಬು ಅಮೀನ್ ಮಾರ್ಗದರ್ಶನದೊಂದಿಗೆ ಅಶೋಕ್ ಎಂ.ಸುವರ್ಣ ಸಹಕಾರ ದೊಂದಿಗೆ ತಯಾರಿಸಿರುವ ಈ ಚಿತ್ರದ ಪೋಸ್ಟರನ್ನು ಧರ್ಮಯೋಗಿ ಮೋಹನ್ ಸ್ವಾಮೀಜಿ ಬಿಡುಗಡೆಗೊಳಿಸಿದರು.

ತುಳುನಾಡಿನ ವೀರ ಪುರುಷರನ್ನು ಆರಾಧಿಸುವ ದಕ್ಷಿಣ ಕನ್ನಡ, ಕಾಸರ ಗೋಡು, ಉಡುಪಿ, ಕೊಡಗು ಜಿಲ್ಲೆ ಹಾಗೂ ಮುಂಬೈಯ ಒಟ್ಟು 242 ಗರೋಡಿಗಳ ಚರಿತ್ರೆಯನ್ನು ವಿಮರ್ಶಿಸಿ ಅಲ್ಲಿನ ಇತಿಹಾಸವನ್ನು ನಿರೂಪಕರ ಮೂಲಕ ನಿರೂಪಿಸಿ ಈ ಚಿತ್ರವನ್ನು ತಯಾರಿಸಲಾಗಿದೆ. ಸುಮಾರು ನೂರಕ್ಕೂ ಹೆಚ್ಚು ಕಂತುಗಳಲ್ಲಿ ಪ್ರಸಾರಗೊಳ್ಳಲಿದೆ ಎಂದು ನಿರ್ದೇಶಕ ಮುದ್ರಾಡಿ ಸುರೇಂದ್ರ ಮೋಹನ್ ತಿಳಿಸಿದರು.

ಈ ಸಾಕ್ಷಚಿತ್ರ ಪ್ರತಿ ರವಿವಾರ ಬೆಳಗ್ಗೆ 11:30ರಿಂದ 12ಗಂಟೆಯವರೆಗೆ ಪ್ರಸಾರಗೊಳ್ಳಲಿದ್ದು, ಪ್ರತಿ ಗುರುವಾರ ರಾತ್ರಿ 9:30ರಿಂದ 10ಗಂಟೆಯವರೆಗೆ ಮರುಪ್ರಸಾರಗೊಳ್ಳಲಿದೆ. ಈಗಾಗಲೇ 9 ದಿನಗಳ ಚಿತ್ರೀಕರಣ ಕಾರ್ಯ ಮುಗಿ ದಿದ್ದು, ಈ ತಿಂಗಳಲ್ಲಿ ಕಾರ್ಕಳ ತಾಲೂಕಿನಲ್ಲಿ ಚಿತ್ರೀಕರಣವನ್ನು ಆರಂಭಿಸ ಲಾಗುವುದು. ಮುಂದೆ ರಾಷ್ಟ್ರೀಯ ಚಾನೆಲ್‌ನಲ್ಲೂ ಪ್ರಸಾರವಾಗುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಅಶೋಕ್ ಸುವರ್ಣ, ಸಲಹೆಗಾರ ದಾಮೋದರ್ ಕಲ್ಮಾಡಿ, ನಿರೂಪಕ ರಮೇಶ್ ಕಲ್ಲೊಟ್ಟೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News