ಪೈಪ್‌ಲೈನ್ ದುರಸ್ತಿ; ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ
Update: 2019-11-27 22:00 IST
ಉಡುಪಿ, ನ.27: ಉಡುಪಿ ನಗರಸಭಾ ವ್ಯಾಪ್ತಿಯ ಕಲ್ಸಂಕದಿಂದ ಅಂಬಾಗಿಲಿಗೆ ಹೋಗುವ ರಸ್ತೆಯ ಬಲಭಾಗದಲ್ಲಿರುವ ಲಕ್ಷ್ಮೀಜ್ಯೂಸ್ ಮತ್ತು ವೆಜಿಟೇಬಲ್ಸ್ ಎದುರು ರಸ್ತೆ ಅಗೆದು ಯುಜಿಡಿ ಪೈಪ್‌ಲೈನ್ ದುರಸ್ತಿಪಡಿಸ ಬೇಕಾಗಿರುವುದರಿಂದ ನ.28ರಿಂದ ಡಿ.7ರವರೆಗೆ ರಸಿಕ ಬಾರ್ ಜಂಕ್ಷನಿನ ಗುಂಡಿಬೈಲಿನಿಂದ ಕಲ್ಸಂಕ ಮುಖ್ಯ ರಸ್ತೆ ಜಂಕ್ಷನ್ ತನಕ ದ್ವಿಪಥ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.
ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಸಾರ್ವಜನಿಕ ರು ನಗರಸಭೆಯೊಂದಿಗೆ ಸಹಕರಿಸುವಂತೆ ನಗರಸಭಾ ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.